ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಕ್ರೀಢೆಯಿಂದ ಒತ್ತಡ ದೂರ ಸಾಧ್ಯ : ನ್ಯಾಯಾಧೀಶ ಸಂಕೊಳ್ಳಿ

ಚಿಕ್ಕಬಳ್ಳಾಪುರ: ಕ್ರೀಢೆಯಿಂದ ಒತ್ತಡ ದೂರ ಸಾಧ್ಯ : ನ್ಯಾಯಾಧೀಶ ಸಂಕೊಳ್ಳಿ

Sat, 19 Dec 2009 19:20:00  Office Staff   S.O. News Service
ಚಿಕ್ಕಬಳ್ಳಾಪುರ, ಡಿಸೆಂಬರ್ 19:  ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯಲ್ಲಿ ಹಾಗೂ ಅಪರಾಧಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಹಿನ್ನಲೆಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ತೀವ್ರ ಒತ್ತಡ ಸದಾಕಾಲ ಇದ್ದು, ಒತ್ತಡಗಳ ನಡುವೆ ಕೆಲಸ ನಿರ್ವಹಿಸುವ ಪೊಲೀಸರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ್ ಶ್ರೀಪಾದ್ ಸಂಕೊಳ್ಳಿ ತಿಳಿಸಿದರು.
 
ಅವರು ಜಿಲ್ಲಾ ಕೇಂದ್ರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ, ಕ್ರೀಡೆಗಳು ಪೊಲೀಸರಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ನವೋತ್ಸಾಹ, ನವೋಲ್ಲಾಸ ಹಾಗೂ ನವ ಚೈತನ್ಯ ಮೂಡಿ ಉತ್ತಮ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಪೊಲೀಸರಿಗೆ ಕ್ರೀಡಾಕೂಟಗಳು ನೆರವಾಗುತ್ತವೆಗುತ್ತವೆ ಎಂದರು.
19-ckb2.jpg
19-ckb3.jpg
19-ckb4.jpg 
ಜಿಲ್ಲಾ ಪೀಠಾಧಿಕಾರಿಗಳು ಮತ್ತು ಅಧಿಕ ಸತ್ರ ನ್ಯಾಯಾಧೀಶರು ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲಕೃಷ್ಣಕೊಳ್ಳಿ ಮಾತನಾಡಿ, ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಅಪರಾಧವೆಸಗುವವರ ಬಳಿ ಆಧುನಿಕ ಮಾರಕ ಉಪಕರಣಗಳು ಇರುತ್ತವೆ. ಪೊಲೀಸರಿಗೆ ಅಂತಹ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹಾಗೂ ಆಧುನಿಕ ಶಸ್ತ್ರಾಸ್ತ್ರಗಳ ಪೂರೈಕೆ ಅಗತ್ಯವಾಗಿದೆ ಎಂದರು.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಪ್ರಸಾದ್ ಮಾತನಾಡಿ, ಪ್ರತಿವರ್ಷ ವಾರ್ಷಿಕ ಕ್ರಿಡಾಕೂಟಗಳನ್ನು ಪೊಲೀಸರಿಗೆ ಒದಗಿಸುವುದು ರೂಢಿಯಾಗಿದ್ದರೂ ಸಹ ಇದೇ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕ್ರೀಡಾಕೂಟವನ್ನು ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದೆ ಎಂದರು.
 
ಈ ಕ್ರೀಡಾಕೂಟದಲ್ಲಿ ವಿವಿಧ ರೀತಿಯ ವೈಯಕ್ತಿಕ ಹಾಗೂ ಸಮೂಹಿಕ ಕ್ರೀಡೆಗಳನ್ನು ಆಯೋಜಿಸಿದ್ದು, ಪೊಲೀಸರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಮಾನಸಿಕ ಸ್ಥೈರ್ಯವನ್ನು ವೃದ್ದಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ರವೀಂದ್ರ ಪ್ರಸಾದ್ ತಿಳಿಸಿದರು.
 
ಪೊಲೀಸ್ ಕ್ರೀಢಾಕೂಟದ ಪ್ರಥಮ ದಿನದ ಪಲಿತಾಂಶ

ಇಂದು ನಡೆದ ಪೊಲೀಸ್ ಕ್ರೀಡಾಕೂಟದ ಇಂದಿನ ವಿಜೇತರು ಈ ಕೆಳಕಂಡಂತಿದೆ.
 
ಪುರುಷರ ವಿಭಾಗದಲ್ಲಿ ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಂಗರಾಜು.ಬಿ ಎ.ಪಿ.ಸಿ.೭೨ ಚಿಕ್ಕಬಳ್ಳಾಪುರ ಡಿ.ಎ.ಆರ್, ದ್ವೀತೀಯ ಸ್ಥಾನ ಚರಣ್ ರಾಜ್ ಎ.ಪಿ.ಸಿ.೧೦೭ ಚಿಕ್ಕಬಳ್ಳಾಪುರ ಡಿ.ಎ.ಆರ್ ಹಾಗೂ ತೃತೀಯ ಸ್ಥಾನ ಅಂಬರೀಶ್.ಬಿ.ವಿ. ೪೫ ಬಾಗೇಪಲ್ಲಿ. ೮೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ ಗಂಗರಾಜು.ಬಿ ಎ.ಪಿ.ಸಿ.೭೨ ಚಿಕ್ಕಬಳ್ಳಾಪುರ ಡಿ.ಎ.ಆರ್, ದ್ವೀತೀಯ ಸ್ಥಾನ ಮುನಿಕೃಷ್ಣ ಎ.ಪಿ.ಸಿ.೭೮ ಚಿಕ್ಕಬಳ್ಳಾಪುರ ಡಿ.ಎ.ಆರ್ ಹಾಗೂ ತೃತೀಯ ಸ್ಥಾನ ಸುರೇಶ್ ೬೮೬ ಗೌರಿಬಿದನೂರು. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ನಾಗರಾಜ್.ವಿ ಗೌರಿಬಿದನೂರು, ದ್ವಿತೀಯ ಸ್ಥಾನ ಬಿ.ವಿಜಯ್‌ಕುಮಾರ್ ಚಿಂತಾಮಣಿ ಹಾಗೂ ತೃತೀಯ ಹೆಚ್.ಎಂ.ಸಂತೋಷ್ ಶಿಡ್ಲಘಟ್ಟ. ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ನಾಗರಾಜ್.ವಿ ೫೭೫ ಗೌರಿಬಿದನೂರು(೨೯.೮೨ ಮೀ), ದ್ವಿತೀಯ ಸ್ಥಾನ ಬಿ.ವಿಜಯ್‌ಕುಮಾರ್ ೩೭೫ ಚಿಂತಾಮಣಿ(೨೮.೭೮ ಮೀ) ಹಾಗೂ ತೃತೀಯ ಸ್ಥಾನ ಮಲ್ಲಿಕಾರ್ಜುನ.ಎಸ್ ೨೭೦ ಶಿಡ್ಲಘಟ್ಟ(೨೪.೭೨ ಮೀ). ಉದ್ದಜಿಗಿತ ಪ್ರಥಮ ಸ್ಥಾನ ಪ್ರಭಾಕರ್ ೪೫೫ ಬಾಗೇಪಲ್ಲಿ(೫.೦೭ ಮೀ), ದ್ವೀತೀಯ ಸ್ಥಾನ ಮಂಜುನಾಥ್ ೮೯೩ ಚಿಕ್ಕಬಳ್ಳಾಪುರ (೫.೦೪ ಮೀ) ಹಾಗೂ ತೃತೀಯ ಸ್ಥಾನ ಗಂಗರಾಜು ೭೨ ಚಿಕ್ಕಬಳ್ಳಾಪುರ ಡಿ.ಎ.ಆರ್. ಎತ್ತರ ಜಿಗಿತ ಪ್ರಥಮ ಸ್ಥಾನ ಸಂತೋಷ್ ಶಿಡ್ಲಘಟ್ಟ, ದ್ವಿತೀಯ ಸ್ಥಾನ ಪ್ರಭಾಕರ್.ಜಿ.ಎಸ್. ೪೫೫ ಬಾಗೇಪಲ್ಲಿ ಹಾಗೂ ತೃತೀಯ ಸ್ಥಾನ ಅಂಬರೀಶ್.ಬಿ.ವಿ. ೪೫ ಬಾಗೇಪಲ್ಲಿ. ಜಾವಲಿನ್ ಥ್ರೋನಲ್ಲಿ ಪ್ರಥಮ ನಾಗರಾಜ್ ೫೭೫ ಗೌರಿಬಿದನೂರು, ದ್ವಿತೀಯ ಇನಾಯತ್‌ವುಲ್ಲಾ ೭೮೫ ಚಿಕ್ಕಬಳ್ಳಾಪುರ, ಮಲ್ಲಿಕಾರ್ಜುನ ೨೭೦ ಶಿಡ್ಲಘಟ್ಟ ಮತ್ತು ಹ್ಯಾಮರ್ ಥ್ರೋನಲ್ಲಿ ಪ್ರಥಮ  ಸೋಮಶೇಖರ್ ೫೬೩ ಚಿಕ್ಕಬಳ್ಳಾಪುರ, ದ್ವಿತೀಯ ಮುರಳಿ ೪೬೭ ಚಿಕ್ಕಬಳ್ಳಾಪುರ ಹಾಗೂ ತೃತೀಯ ಮಂಜುನಾಥ ೨೨೧ ಬಾಗೇಪಲ್ಲಿ ರವರುಗಳು ವಿಜೇತರಾಗಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಅನುಸೂಯಮ್ಮ.ಬಿ.ವಿ ೨೦೮ ಬಾಗೇಪಲ್ಲಿ, ದ್ವಿತೀಯ ಸ್ಥಾನ ಪ್ರೇಮಾವತಿ.ಸಿ.ಎಸ್ ೨೯೫ ಚಿಂತಾಮಣಿ ಹಾಗೂ ತೃತೀಯ ಸ್ಥಾನ ಜ್ಯೋತಿ ೨೬ ಡಬ್ಲೂ.ಪಿ.ಸಿ ಬಾಗೇಪಲ್ಲಿ. ೨೦೦ ಮೀಟರ್ ಓಟದಲ್ಲಿ ಪ್ರಥಮಸ್ಥಾನ ಅನುಸೂಯಮ್ಮ ೨೦೮ ಬಾಗೇಪಲ್ಲಿ, ದ್ವಿತೀಯ ಸ್ಥಾನ ಭಾಗ್ಯ ೫೦೭ ಚಿಕ್ಕಬಳ್ಳಾಪುರ, ತೃತೀಯ ಸ್ಥಾನ ಉಷಾ ಡಬ್ಲೂ.ಪಿ.ಸಿ ೪ ಚಿಂತಾಮಣಿ. ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪ್ರೇಮಾವತಿ.ಸಿ.ಎಸ್. ೨೯೫ ಚಿಂತಾಮಣಿ, ದ್ವಿತೀಯ ಸ್ಥಾನ ರತ್ನಾಬಾಯಿ ಡಬ್ಲೂ.ಹೆಚ್.ಸಿ ೨೮೬ ಚಿಕ್ಕಬಳ್ಳಾಪುರ ಹಾಗೂ ತೃತೀಯ ಸ್ಥಾನ ಜ್ಯೋತಿ ಡಬ್ಲೂ.ಪಿ.ಸಿ ೨೬ ಬಾಗೇಪಲ್ಲಿ. ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಚಂದ್ರಕಲಾ ಎ‌ಎಸ್‌ಐ ಮಂಚೇನಹಳ್ಳಿ (೧೪.೬೨ ಮೀ), ದ್ವಿತೀಯ ಸ್ಥಾನ ರತ್ನಾಬಾಯಿ ಚಿಕ್ಕಬಳ್ಳಾಪುರ (೧೪.೩೮ ಮೀ) ಹಾಗೂ ತೃತೀಯ ಸ್ಥಾನ ಉಷಾರಾಣಿ ಚಿಂತಾಮಣಿ (೧೩.೯೦ ಮೀ) ಅವರುಗಳು ವಿಜೇತರಾಗಿದ್ದಾರೆ.

೪೫ ವರ್ಷದ ಒಳಗಡೆ ಅಧಿಕಾರಿಗಳ ವಿಭಾಗದಲ್ಲಿ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ನಾಗೇಂದ್ರ ಪ್ರಸಾದ್.ಎನ್.ಎಲ್ ಚಿಕ್ಕಬಳ್ಳಾಪುರ ಡಿ.ಎ.ಆರ್, ದ್ವಿತೀಯ ಸ್ಥಾನ ನಾರಾಯಣಸ್ವಾಮಿ.ವಿ ಶಿಡ್ಲಘಟ್ಟ ರೂರಲ್ ಹಾಗೂ ತೃತೀಯ ಸ್ಥಾನ ಮುನಿರೆಡ್ಡಿ.ವಿ ಚಿಕ್ಕಬಳ್ಳಾಪುರ ರೂರಲ್. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ರಮೇಶ್.ಕೆ.ಎನ್ ಡಿ.ಎಸ್.ಬಿ ಪಿ‌ಐ ಚಿಕ್ಕಬಳ್ಳಾಪುರ, ದ್ವಿತೀಯ ಸ್ಥಾನ ಸತೀಶ್.ಕೆ.ಜಿ ಪಿ.ಎಸ್.ಐ ಚಿಂತಾಮಣಿ ಹಾಗೂ ತೃತೀಯ ಸ್ಥಾನ ಮುನಿಕೃಷ್ಣ.ಡಿ.ಹೆಚ್ ಪಿ.ಎಸ್.ಐ ಮಂಚೇನಹಳ್ಳಿ. ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ರಮೇಶ್.ಕೆ.ಎನ್ ಡಿ.ಎಸ್.ಬಿ  ಚಿಕ್ಕಬಳ್ಳಾಪುರ, ದ್ವಿತೀಯ ಸ್ಥಾನ ನಾಗೇಂದ್ರ ಪ್ರಸಾದ್.ಎನ್.ಎಲ್ ಚಿಕ್ಕಬಳ್ಳಾಪುರ ಡಿ.ಎ.ಆರ್ ಹಾಗೂ ತೃತೀಯ ಸ್ಥಾನ ಮುನಿಕೃಷ್ಣ.ಡಿ.ಹೆಚ್ ಪಿ.ಎಸ್.ಐ ಮಂಚೇನಹಳ್ಳಿ. ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ರಮೇಶ್.ಕೆ.ಎನ್ ಡಿ.ಎಸ್.ಬಿ ಚಿಕ್ಕಬಳ್ಳಾಪುರ, ಆನಂದ್ ಕುಮಾರ್ ಪಿ.ಎಸ್.ಐ ಬಾಗೇಪಲ್ಲಿ ಹಾಗೂ ತೃತೀಯ ಸ್ಥಾನ ನಾಗೇಂದ್ರ ಪ್ರಸಾದ್.ಎನ್.ಎಲ್ ಚಿಕ್ಕಬಳ್ಳಾಪುರ ಡಿ.ಎ.ಆರ್ ಅವರುಗಳು ವಿಜೇತರಾಗಿದ್ದಾರೆ.
 
೪೫ ವರ್ಷದ ಮೇಲ್ಪಟ್ಟ ಅಧಿಕಾರಿಗಳ ವಿಭಾಗದಲ್ಲಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಸಂಜೀವಪ್ಪ ಪಿ.ಎಸ್.ಐ ಚೇಳೂರು, ದ್ವಿತೀಯ ಸ್ಥಾನ ಶಾಂತಪ್ಪ ಪಿ.ಎಸ್.ಐ ಚಿಕ್ಕಬಳ್ಳಾಪುರ ಹಾಗೂ ತೃತೀಯ ಸ್ಥಾನ ನಾಯಕ್ ಡಿ.ಎ.ಆರ್ ಆರ್.ಪಿ.ಐ ಚಿಕ್ಕಬಳ್ಳಾಪುರ ರವರುಗಳು ವಿಜೇತರಾಗಿದ್ದಾರೆ.
 



Share: