ಮಂಜೇಶ್ವರ, ಡಿಸೆಂಬರ್ 27: ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ಮನೆಯವರಿಗೆ ನೀಡಿ ಸ್ಮೃತಿ ತಪ್ಪಿಸಿ ಮನೆಕೆಲಸದಾಕೆ ೧೭ ಪವನ್ ಚಿನ್ನಾಭರಣ ಅಪಹರಣಗೈದ ಕೆಲಸದಾಕೆ ಪರಾರಿಯಾದ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮುಹಮ್ಮದ್ ಎಂಬವರ ಮನೆಯ ತಮಿಳುನಾಡು ಮೂಲದ ಇಂದಿರಾ ಎಂಬಾಕೆ ನೀಡಿದ ಪಾನೀಯ ಸೇವಿಸಿದ ಮುಹಮ್ಮದ್ರ ಪತ್ನಿ ಪಿ.ಕೆ ಸುಹರಾ ,ಮಕ್ಕಳಾದ ಬುಶ್ರಾ, ಬುರ್ಹಾನ, ಬುರ್ಶಾನ, ಮುಹಮ್ಮದ್ ಮನಾಸ್, ಎಂಬವರು ಸ್ಮೃತಿ ತಪ್ಪಿದ್ದು ಈ ಸಂದರ್ಭದಲ್ಲಿ ಈಕೆ ಚಿನ್ನಾಭರ್ಅಣವನ್ನು ಅಪಹರಿಸಿ ಪರಾರಿಯಾದಳೆನ್ನಲಾಗಿದೆ. ಅಸ್ವಸ್ಥರಾದ ಇವರನ್ನು ಕಾಸರಗೋಡು ಮಾಲಿಕ್ದೀನಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಾಞಂಗಾಡು ರೈಲ್ವೇ ನಿಲ್ದಾಣ ಬಳಿ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುವ ಅಲ್ಯೂಮೀನಿಯಂ ಪಾತ್ರೆ ಮಾರಾಟ ಮಾಡುವ ಮಹಿಳೆಯೋರ್ವಳನ್ನು ಮನೆಕೆಲಸಕ್ಕಾಗಿ ನಾಲ್ಕು ದಿನಗಳ ಹಿಂದೆ ಮುಹಮ್ಮದ್ರ ಮನೆಗೆ ಕರೆ ತಂದಿದ್ದರು.
ಶುಕ್ರವಾರ ಎಲ್ಲರೂ ಆಹಾರ ಸೇವಿಸಿದ ಬಳಿಕ ಮನೆಕೆಲಸದಾಕೆ ಪಾನೀಯ ತಯಾರಿಸಿ ಮನೆಯವರಿಗೆ ನೀಡಿದ್ದಳು .ಈ ಪಾನೀಯದ ಬಗ್ಗೆ ವಿಶ್ವಾಸ ಮೂಡಿಸಲು ಪ್ರಥಮವಾಗಿ ಆಕೆಯೇ ಅದನ್ನು ಸೇವಿಸಿದ್ದಳು.ಆದರೆ ಉಳಿದವರು ಸೇವಿಸಿದ ಬಳಿಕ ಸ್ಮೃತಿ ತಪ್ಪಿ ಬಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾರೂ ಕಾಣದಿರುವುದನ್ನು ಗಮನಿಸಿದ ಸ್ಥಳೀಯರು ಮನೆಯೊಳಕ್ಕೆ ನೋಡಿದಾಗ ಐವರು ಪ್ರಜ್ಞಾಹೀನರಾಗಿ ಬಿದ್ದಿರುವೂದು ಕಂಡುಬಂದಿತ್ತು. ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ