ಮಂಜೇಶ್ವರ, ಡಿಸೆಂಬರ್ 27: ಉಪ್ಪಲ ಐಲ ರೈಲ್ವೇ ಗೇಟ್ ಬಳಿ ರೈಲ್ವೇ ಹಳಿಯೊಂದು ಬಿರಿಕು ಬಿಟ್ಟಿದ್ದು ಯುವಕನೋರ್ವನ ಸಕಾಲಿಕ ಕಾರ್ಯಾಚರಣೆಯಿಂದ ಬಾರೀ ದುರಂತ ತಪ್ಪಿ ಹೋಗಿದೆ.
ಇಂದು ಬೆಳಿಗ್ಗೆ ಈ ದಾರಿಯಾಗಿ ಬಂದ ಸ್ತಳೀಯ ಯುವಕ ರಾಜೇಶ್ ಹಳಿ ಬಿರುಕು ಬಿಟ್ಟ ಬಗ್ಗೆ ಗಮನಿಸಿದ್ದು ಕೂಡಲೇ ಉಪ್ಪಳ ರೈಲ್ವೇ ನಿಲ್ದಾಣಕ್ಕೆ ಮಾಹಿತಿ ನೀಡಿದ್ದ ಸಕಾಲಿಕ ಕಾರ್ಯಚರಿಸಿದ ಅಧಿಕಾರಿಗಳು ಒಂದು ತಾಸುಗಳ ಕಾಲ ದುರಸ್ತಿ ನಡೆಸಿದ ಬಳಿಕ ಸರಿಪಡಿಸಲಾಯಿತು. ರಾಜೇಶ್‌ನ ಸಕಾಲಿಕ ಕಾರ್ಯಾಚರಣೆಯಿಂದ ಬಾರೀ ದುರಂತವೊಂದು ತಪ್ಪಿದ್ದು ಈತ ಊರವರ ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾದನು.

ತುಂಡಾಗಿದ್ದ ಹಳಿಯನ್ನು ಕೂಡಲೇ ದುರಸ್ತಿಪಡಿಸಿ ರೈಲುಗಳ ಸುಗಮ ಓಡಾಟಕ್ಕೆ ಅನುವುಮಾಡಿಕೊಡಲಾಯಿತು.

ಚಿತ್ರ, ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ