ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರ ಸುರಕ್ಷಿತವೇ?

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರ ಸುರಕ್ಷಿತವೇ?

Wed, 23 Dec 2009 03:11:00  Office Staff   S.O. News Service
ಕಾರವಾರ: ಉದ್ಯೋಗಿ ರವಿ ಮೂಳೆ, ವೈಜ್ಞಾನಿಕ ಅಧಿಕಾರಿ ಎಲ್.ಮಹಾಲಿಂಗಂ ಅವರ ಸಂಶ ಯಾಸ್ಪದ ಸಾವು, ವಾಟರ್‌ಕೂಲರ್‌ನಲ್ಲಿ ‘ಭಾರಜಲ’ ಮಿಶ್ರಣ ಮಾಡಿರುವ ಘಟನೆಯಿಂದ ಸದಾ ಸುದ್ದಿಯಲ್ಲಿರುವ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರ ಎಷ್ಟು ಸುರಕ್ಷಿತವಾಗಿದೆ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಮಾರ್ಚ್ 5, 2000ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರು ಕೈಗಾ ಅಣು ವಿದ್ಯುತ್ ಸ್ಥಾವರನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದರು. ಸಾಕಷ್ಟು ವಿರೋಧದ ಮಧ್ಯೆಯೂ ತಲೆಯೆತ್ತಿ ನಿಂತಿರುವ ಸ್ಥಾವರಕ್ಕೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ ಎಂದು ವಾಜಪೇಯಿ ಭಾಷಣ ದಲ್ಲಿ ಹೇಳಿದ್ದರು. ಆದರೆ ಪರಿಸ್ಥಿತಿ ಭಿನ್ನವಾಗಿದೆ.

ಕೈಗಾ ಪರಮಾಣು ವಿದ್ಯುತ್ ಸ್ಥಾವರ ಕಾರವಾರ- ಇಳಕಲ್ ರಾಜ್ಯ ಹೆದ್ದಾರಿಯಲ್ಲಿ, ಮಲ್ಲಾಪುರ ದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ. ಮಾರ್ಗಮಧ್ಯದಲ್ಲಿ ವಿರ್ಜೆ, ಕುಚೇಗಾರ್, ಹರ್ಟುಗಾ ಎನ್ನುವ ಚಿಕ್ಕಚಿಕ್ಕ ಗ್ರಾಮಗಳು ಸಿಗುತ್ತವೆ. ಕೈಗಾದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಹೊರರಾಜ್ಯ ಹಾಗೂ ಹೊರ ಜಿಲ್ಲೆಯ ಜನರು ಹರ್ಟುಗಾದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಆಶ್ಚರ್ಯವೆಂದರೆ ಈ ತಾತ್ಕಾಲಿಕ್ ಶೆಡ್‌ಗಳನ್ನು ನಿರ್ಮಿಸ ಲು ಮಲ್ಲಾಪುರ ಗ್ರಾಮ ಪಂಚಾಯಿತಿ ಪರವಾನಿಗೆ ನೀಡಿಲ್ಲ.

ಮುಂದೆ ಕೈಗಾ ಸ್ಥಾವರಕ್ಕೆ ಹೋಗಲು ತಿರುವು ಪಡೆದುಕೊಳ್ಳುವ ಸ್ಥಳದಲ್ಲಿ ಬಾರೆ ಪೊಲೀಸ್ ಚೆಕ್ಪೋಸ್ಟ್ ಸಿಗುತ್ತದೆ. ಇಬ್ಬರೇ ಡಿಎಆರ್ ಪೊಲೀಸರಿರುವ ಚೆಕ್ಪೋಸ್ಟ್‌ನಲ್ಲಿ ವಾಹನದ ಸಂಖ್ಯೆ, ಚಾಲಕನ ಹೆಸರು ಹಾಗೂ ಲೈಸನ್ಸ್‌ನ ವಿವರಗಳನ್ನು ಮಾತ್ರ ಪಡೆಯಲಾಗುತ್ತದೆಯೇ ಹೊರತು ವಾಹನದಲ್ಲಿ ಯಾರಿದ್ದಾರೆ, ಎಲ್ಲಿಗೆ ಹೋಗುತ್ತಾರೆ ಎಂದು ತಪಾಸಣೆ ಮಾಡುವುದು ವಿರಳ.

ಬಾರೆ ಚೆಕ್‌ಪೋಸ್ಟ್ ದಾಟಿ ಮುಂದೆ ಹೋದ ನಂತರ ದಟ್ಟಾರಣ್ಯ ಸಿಗುತ್ತದೆ. ಕಿರಿದಾದ ರಸ್ತೆಯಲ್ಲಿ ಸಾಗುವುದು ಇಲ್ಲಿ ತುಂಬಾ ಅಪಾಯಕಾರಿ. ಚೆಕ್‌ಪೋಸ್ಟ್‌ನಿಂದ ಸುಮಾರು ಎಂಟ್ಹತ್ತು ಕಿ.ಮೀ. ಕ್ರಮಿಸಿದ ನಂತರ ಎತ್ತರದ ಪ್ರದೇಶದಿಂದ ಕೈಗಾ ಅಣು ಸ್ಥಾವರ ತುಂಬಾ ಸ್ಪಷ್ಟವಾಗಿ ಗೋಚರಿ ಸುತ್ತದೆ. ಇದೇ ಸ್ಥಳವನ್ನು ಬಳಸಿಕೊಂಡು ದುಷ್ಕರ್ಮಿಗಳು ಸುಲಭವಾಗಿ ಸ್ಥಾವರದ ಮೇಲೆ ದಾಳಿ ಮಾಡಬಹುದು.

ಈ ಮಾರ್ಗದಿಂದ ಸಂಚರಿಸುವ ಅಪರಿಚಿತ ವ್ಯಕ್ತಿಗಳು ಕೈಗಾ ಸ್ಥಾವರದ ಫೋಟೊ ತೆಗೆದುಕೊಂ ಡು ಹೋಗುತ್ತಿರುತ್ತಾರೆ. ಅವರ ನಡೆಯೂ ಸಂಶಯಾಸ್ಪದವಾಗಿರುವುದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಕಂಡುಬಂತು. ಅವರು ಯಾರು, ಎಲ್ಲಿಂದ ಬಂದವರು ಎಂದು ವಿಚಾರಿಸಲು ಅಲ್ಲಿ ಯಾರೂ ಇಲ್ಲ. ಬಾರೆಯಿಂದ ಯಲ್ಲಾಪುರ ತಾಲ್ಲೂಕಿನ ಮಲವಳ್ಳಿವರೆಗೆ ಪೊಲೀಸ್ ಗಸ್ತು ವ್ಯವಸ್ಥೆ ಇಲ್ಲ.

ಸ್ವಲ್ಪ ಮುಂದೆ ಸಾಗಿದರೆ ಪರಮಾಣು ಸ್ಥಾವರದಿಂದ ಹೈಟೆನ್ಸ್ಯನ್ ಲೈನ್‌ಗಳು ರಾಜ್ಯ ಹೆದ್ದಾರಿ ಯಿಂದ ಹಾದು ಹೋಗಿವೆ. ಈ ಸ್ಥಳದಿಂದಲೂ ಸ್ಥಾವರ ಕೆಲವೇ ಹೆಜ್ಜೆಗಳ ದೂರದಲ್ಲಿದೆ. ಇಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಮರದ ಟೊಂಗೆಗಳನ್ನು ನಿಲ್ಲಿಸಿ ಅದಕ್ಕೆ ತಂತಿಗಳನ್ನು ಕಟ್ಟಲಾಗಿದೆ. .

ಕಾರವಾರ- ಇಳಕಲ್ ಮಾರ್ಗದಲ್ಲಿ ಮಲ್ಲಾಪುರ ಕಡೆಯಿಂದ ಯಲ್ಲಾಪುರದತ್ತ ಹೋಗುವ ವಾಹನ ಗಳನ್ನು ಮಾತ್ರ ಬಾರೆಯಲ್ಲಿ ತಪಾಸಣೆ ಮಾಡಲಾಗುತ್ತದೆ. ಯಲ್ಲಾಪುರಿಂದ ಮಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಯಾವುದೇ ಚೆಕ್‌ಪೋಸ್ಟ್‌ಗಳಿಲ್ಲ.
 

ಸೌಜನ್ಯ: ಪ್ರಜಾವಾಣಿ  

Share: