ಮಂಗಳೂರು, ಸೆ.25 ಮುಸ್ಲಿಮರು ಎಲ್ಲ ಕ್ಷೇತ್ರದಲ್ಲಿ ಸಬಲೀಕರಣವಾಗ ಬೇಕಾದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗೃತರಾಗಬೇಕು ಎಂದು ಟೀಕೇಸ್ ಇಂಟೀರಿಯರ್ ಡೆಕೋರೇಟ್ನ ಮಾಲಕ ಉಮರ್ ಟಿ.ಕೆ. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜೋಕಟ್ಟೆ ಅಂಜುಮನ್ ವಿದ್ಯಾ ಸಂಸ್ಥೆ ಏರ್ಪಡಿಸಿದ ಅನಿವಾಸಿ ಜೋಕಟ್ಟೆಯವರ ವಿಶೇಷ ಕೂಟದಲ್ಲಿ ಆಹ್ವಾನಿತರಾಗಿ ಅವರು ಮಾತನಾಡುತ್ತಿದ್ದರು.
ಮುಸ್ಲಿಮ್ ಸಮುದಾಯ ಒಂದು ಯೋಜನೆ ಹಾಕಿ ಕೊಂಡು ಅದರ ಪ್ರಗತಿಗಾಗಿ ಶ್ರಮಿಸುವದು ಕಡಿಮೆ. ಆದರೆ ಜೋಕಟ್ಟೆಯ ಮುಸ್ಲಿಮರು ಪ್ರಗತಿಯ ಬಗ್ಗೆ ಹಠವಾದಿಗಳಾಗಿ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಈ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ, ಹೈಸ್ಕೂಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು ತೆರೆದು ಜೋಕಟ್ಟೆಯ ಜನತೆ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದರು.
ಜೋಕಟ್ಟೆಯಲ್ಲಿ ಮಹಿಳಾ ಕಾಲೇಜು ಸ್ಥಾಪಿಸಬೇಕು ಎಂದು ತೀರ್ಮಾನ ಕೈಗೊಂಡ ಸಭೆಯಲ್ಲಿ ಮೂಲತ: ಜೋಕಟ್ಟೆಯ ಪ್ರಸ್ತುತ ಸೌದಿ ಅರೇಬಿಯ ಅನ್ ಅಬೀಬ್ ಕಂಪೆನಿಯ ಝಕರಿಯ್ಯರ ನೇತೃತ್ವದಲ್ಲಿ ಯೋಜನಾ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಮಾಜಿ ಸಚಿವ ಬಿ.ಎ.ಮೊದಿನ್, ಉಮರ್ ಟಿ.ಕೆ.ಯವರಿಗೆ ಜವಾಬ್ದಾರಿ ವಹಿಸಲಾಯಿತು. ಸೌದಿ ಅರೇಬಿಯಾದ ಜಾಮಾ ಸಂಘಟನೆಯ ಪ್ರತಿನಿಧಿ ಶೇಖು ಅಲ್ ಸಲಾಂ ಝಕರಿಯ್ಯರ ರೊಂದಿಗೆ ಸಂಪೂರ್ಣ ಸಹಕರಿಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ವಹಿಸಿದ್ದರು.
ಸಂಚಾಲಕ ಹಾಜಿ ಬಿ.ಎಸ್.ಶರೀಫ್, ಮಸೀದಿಯ ಅಧ್ಯಕ್ಷ ಹಾಜಿ ಪಿ.ಮುಹಮ್ಮದ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ರೆವೆನ್ಯೂ ಇನ್ಸ್ಪೆಕ್ಟರ್ ಹಾಜಿ ಮೂಸಬ್ಬ, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಹ ಸಂಚಾಲಕ ಎ.ಎಂ. ಅತಾವುಲ್ಲ ಜೋಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಾಯಿರ್ ಹಾಜಿ ವಂದಿಸಿದರು.