ಭಟ್ಕಳ: ಶಿರಾಲಿ ಬಳಿಯ ರಾ. ಹೆದ್ದಾರಿ ೬೬ರಲ್ಲಿ ಕಾರೊಂದು ಎರಡು ಬೈಕಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ಗಂಭೀರವಾಗಿ ಗಾಯಗೊಂಡ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆ ಇನ್ನೊಂದು ಬೈಕಿನ ಸವಾರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಳ್ವೆಕೋಡಿಯ ರಾಮಚಂದ್ರ ನಾಗೇಶ ಮೊಗೇರ (೪೨) ಸಾವನ್ನಪ್ಪಿದ ದುರ್ದೈವಿ. ಭಾನುವಾರ ರಾತ್ರಿ ಕೈಕಿಣಿಯಿಂದ ಅಳ್ವೆಕೋಡಿಗೆ ಬೈಕ್ ಮೇಲೆ ಬರುತ್ತಿದ್ದರು. ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಬಳಿಕ ಅದೆ ಕಾರು ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದು ಅದರಲ್ಲಿ ಸವಾರಿ ಮಾಡುತ್ತಿದ್ದ ಶಿರಾಲಿಯ ರವಿಶಂಕರ ನಾಯ್ಕ, ರೇವತಿ ನಾಯ್ಕ, ಪ್ರತಿಕ್ಷಾ ನಾಯ್ಕ ಕೂಡ ಗಾಯಗೊಂಡಿದ್ದಾರೆ. ಅದೃಷ್ಟವಶಾತ ಇವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಅಪಘಾತಪಡಿಸಿದ ಸ್ವಿಪ್ಟ್ ಡಿಸೈರ್ ಕಾರು ವೆಂಕಟಾಪುರ ಬಳಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ರಾಮಚಂದ್ರ ಮೊಗೇರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತನಿಗೆ ಮೂವರು ಮಕ್ಕಳಿದ್ದು ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.