ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಹೆಂಡತಿಯ ಮೇಲೆ ಸಂಶಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

ಭಟ್ಕಳ:ಹೆಂಡತಿಯ ಮೇಲೆ ಸಂಶಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

Tue, 26 Dec 2023 06:31:13  Office Staff   SO News

ಭಟ್ಕಳ:ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಪತಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮುರುಡೇಶ್ವರ ಮಾವಳ್ಳಿ-1 ರ ಜನತಾ ಕಾಲೊನಿಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಕೃಶಿದಾ ಬಾನು ಎಂದು ತಿಳಿದು ಬಂದಿದೆ. ಈಕೆಗೆ ಕಳೆದ 15 ವರ್ಷದ ಹಿಂದೆ ಹುಬ್ಬಳ್ಳಿ ಮೂಲದ ಆರೋಪಿ ರಶೀದ ಬೇಪಾರಿ ಎನ್ನುವವರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಆದರೆ ಆರೋಪಿ ಕಳೆದ ಹಲವು ತಿಂಗಳಿನಿಂದ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು  ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಇದರಿಂದ ಆಕೆ ಗಂಡನ ಮನೆ ಬಿಟ್ಟು ಮಾವಳ್ಳಿ 1 ಗ್ರಾಮದ ಜನತಾ ಕಾಲೋನಿಯಲ್ಲಿರುವ ತನ್ನ ಸಹೋದರಮ ಮನೆಯಲ್ಲಿ ಗಂಡನೊಂದಿಗೆ ವಾಸವಾಗಿದ್ದಳು.ಆದರೂ ಕೂಡ ಆರೋಪಿ ತನ್ನ ಹೆಂಡತಿಯ ಮೇಲೆ ಸಂಶಯಪಟ್ಟು ಅಲ್ಲಿಯೂ ಕೂಡ ಆಕೆ ಮೇಲೆ ಹಲ್ಲೆ ಮಾಡಿದ್ದವನು ತನ್ನ ಪತ್ನಿಯನ್ನು  ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.


Share: