ಭಟ್ಕಳ: ಮಾರ್ಚ್ 2: ಸೋಮವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವಿಚಿತ್ರ ಶಿಶುವನ್ನು ಜನ್ಮ ನೀಡಿದ್ದು ಇದೊಂದು ಅಪರೂಪದ ಪ್ರಕರಣವೆಂದು ಹೇಳಲಾಗಿದೆ.ಹೆರಿಗೆ ಸಂದರ್ಭದಲ್ಲಿ ಶಿಶುವಿನ ಉದರದೊಳಗಿರಬೇಕಾಗಿದ್ದ ಕರುಳು ಹೊರಗೆ ಇರುವುದನ್ನು ಗಮನಿಸಿದ ವೈದ್ಯೆ ಡಾ.ಸವಿತಾ ಕಾಮತ್ ತಕ್ಷಣ ಪ್ರಥಮಾ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಇಂತಹ ಶಿಶುವಿನ ಜನನವನ್ನು ಅಪರೂಪವೆಂದು ಹೇಳಲಾಗುತ್ತಿದ್ದು ಕರುಳನ್ನು ಹೊರಗಿಟ್ಟುಕೊಂಡು ಜನಿಸಿರುವುದನ್ನು ವೈದ್ಯಕೀಯ ಭಾಷೆಯಲ್ಲಿ ಎಕ್ಸಾಂಪಲಸ್ ಮೇಜರ್ ಎಂದು ಕರೆಯುವುದಾಗಿ ವೈದ್ಯರು ಹೇಳುತ್ತಾರೆ. ಇದನ್ನು ಶಸ್ತ್ರ ಚಿಕಿತ್ಸೆಯ ಮೂಳಕ ಮತ್ತೆ ಅದರ ಮೂಲದ ಸ್ಥಳದಲ್ಲಿ ಸೇರಿಸಬಹುದಾಗಿದ್ದು ಅಲ್ಲಿಯ ವೆರಗೆ ಕರುಳಿಗೆ ಯಾವುದೆ ಸೊಂಕು ತಗುಲದ ಹಾಗೆ ಜೋಪಾನ ವಹಿಸುವ ಅಗತ್ಯವಿದೆ. ಶಿಶುವಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯತೆ ಇರುವುದರಿಂದಾಗಿ ವೈದ್ಯರ ಸೂಚನೆಯ ಮೆರೆಗೆ ಶಿಶುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.