ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬೆಂಗಳೂರು - ಮೈಸೂರು ಹೆದ್ದಾರಿ ಯೋಜನೆ ಎಂಬ ಕೂಸಿಗೆ ದೇವೇಗೌಡರೇ ತಂದೆ - ಡಿ.ಬಿ.ಚಂದ್ರ್‍ಏಗೌಡ

ಬೆಂಗಳೂರು: ಬೆಂಗಳೂರು - ಮೈಸೂರು ಹೆದ್ದಾರಿ ಯೋಜನೆ ಎಂಬ ಕೂಸಿಗೆ ದೇವೇಗೌಡರೇ ತಂದೆ - ಡಿ.ಬಿ.ಚಂದ್ರ್‍ಏಗೌಡ

Tue, 12 Jan 2010 03:00:00  Office Staff   S.O. News Service
ಬೆಂಗಳೂರು,ಜನವರಿ 11:ಬೆಂಗಳೂರು - ಮೈಸೂರು ಎಕ್ಸ್ ಪ್ರಸ್ ಹೆದ್ದಾರಿ ಯೋಜನೆ ಎಂಬ ನೈಸ್ ಕೂಸಿಗೆ ಮಾಜಿ ಪ್ರಧಾನಿ ದೇವೇಗೌಡರೇ ತಂದೆಯಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲ ಎಂದು ಸಂಸದ, ಹಾಗೂ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಇಂದಿಲ್ಲಿ ಪ್ರತಿಕ್ರಯಿಸಿದ್ದಾರೆ. 

ಮಾಜಿ ಪ್ರಧಾನಿ ದೇವೇಗೌಡು ಮುಖ್ಯಮಂತ್ರಿಯಾಗಿದ್ದ ನೈಸ್ ಯೋಜನೆ ಶಿಶುವಿಗೆ ಜನ್ಮ ನೀಡಿರುವಾಗ ಈ ಯೋಜನೆಗೆ ಅವರೇ ತಂದೆ ಹೊರತು ಬೇರೆ ಯಾರೂ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದಾರೆ. 

ನೈಸ್ ಯೋಜನೆಗೆ ದೇವೇಗೌಡರೇ ಜನ್ಮ ನೀಡಿ, ಯಡಿಯೂರಪ್ಪ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವುದು ನಾಡಿನ ಜನತೆಗೆ ಮಾಡಿದ ಅಪಮಾನ, ದೇವೇಗೌಡರು ಮುಖ್ಯಮಂತ್ರಿ ವಿರುದ್ಧ ಬಳಸಿರುವ ಅವಾಚ್ಯ ಶಬ್ದಗಳನ್ನು ವಾಪಸ್ ಪಡೆದು ಕ್ಷಮೆ ಕೋರಬೇಕೆಂದು ಬಿಜೆಪಿ ಪಕ್ಷದ ಪರವಾಗಿ ಆಗ್ರಹಿಸಿದರು.

ಅಧಿಕಾರ ಕಳೆದುಕೊಂಡು ಹತಾಶರಾಗಿರುವ ದೇವೇಗೌಡರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಪರ ಎನ್ನುವ ಸೋಗಿನಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ಗೇಲಿಮಾಡಿ, ಈ ಹೋರಾಟದಲ್ಲಿ ದೇವೇಗೌಡರ ನಿಜವಾದ ಬಣ್ಣ ಬಯಲಾಗಲಿದೆ ಎಂದರು. 

ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ದೇವೇಗೌಡರ ಪ್ರಯತ್ನ ಅವರಿಗೇ ತಿರುಗುಬಾಣವಾಗುತ್ತದೆ. ಹಗುರವಾಗಿ ಮಾತನಾಡುವುದನ್ನು ದೇವೇಗೌಡರು ಬಿಟ್ಟರೆ ಒಳ್ಳೆಯದು. ಇಲ್ಲವಾದರೆ ಅವರ ಘನತೆ ಗೌರವ ಮತ್ತಷ್ಟು ಮಣ್ಣುಪಾಲಾಗಲಿದೆ ಎಂದರು. 

ನೈಸ್‌ನ ಮೂಲ ಒಪ್ಪಂದವನ್ನು ಜಾರಿಮಾಡಿದ್ದೇ ದೇವೇಗೌಡರು. ಆಗ ಅವರಿಗೆ ರೈತರ ಜಮೀನು ಹೋಗುತ್ತದೆ ಎನ್ನುವ ಅರಿವು ಇರಲಿಲ್ಲವೆ?. ಈ ವಿಚಾರದಲ್ಲಿ ಹೋರಾಟ ಮಾಡುವುದಿದ್ದರೆ ನ್ಯಾಯಾಲಯದ ಮೂಲಕ ಮಾಡಲಿ. ಅದು ಬಿಟ್ಟು ಮುಖ್ಯಮಂತ್ರಿ ಮನೆ ಮುಂದೆ ಧರಣಿ, ಬೀದಿಯಲ್ಲಿ ಕುಳಿತು ನಾಟಕವಾಡುವುದು ಬೇಡ ಎಂದು ಸಲಹೆ ನೀಡಿದರು. 
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಎಲ್ಲಾ ಬಿಜೆಪಿ ಶಾಸಕರು ಪಾಲ್ಗೊಂಡು, ದೇವೇಗೌಡರ ವಿರುದ್ಧ ಹರಿ ಹಾಯ್ದರು. 


Share: