ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ

ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ

Sun, 21 Apr 2024 04:34:27  Office Staff   SO News

ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ  ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಶನಿವಾರ ಭಟ್ಕಳ ಸಮೀಪ ನಡೆದಿದೆ.

ಓಂ ಮಹಾಗಣಪತಿ ಹೆಸರಿನ ಬೋಟ್ ಮುಳುಗಿದ್ದ ಬೋಟ್ ಆಗಿದ್ದು, ಬೋಟಿನಲ್ಲಿದ್ದ ನಾಲ್ವರು ಮೀನುಗಾರರ ರಕ್ಷಿಸಲಾಗಿದೆ. ಮಹಾದೇವ ಖಾರ್ವಿ ಎಂಬುವವರಿಗೆ ಸೇರಿದ ಬೋಟು ಇದಾಗಿದೆ.

ಭಟ್ಕಳದ ಮಾವಿನಕುರ್ವೆ  ಬಂದರಿನಿಂದ  ಮೀನುಗಾರಿಕೆಗೆ ತೆರಳಿದ್ದಾಗ ಸುಮಾರು ಮೂರು ನಾಟಿಕಲ್ ದೂರದಲ್ಲಿ ಘಟನೆ ಸಂಭವಿಸಿದೆ. ಅಲ್ಲಿಯೇ ಹತ್ತಿರದಲ್ಲಿದ್ದ ನಾಲ್ಕು ಬೋಟ್‌ ಗಳಿಂದ ಅಪಾಯದಲ್ಲಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ಹಾನಿ ಉಂಟಾಗಿದೆ.


Share: