ಕೋಲಾರ, ಮಾರ್ಚ್ ೦೬ :ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣೆ ಸಂಬಂಧ ಮಾರ್ಚ್ ೦೫ ರ ರಾತ್ರಿ ಮುಳಬಾಗಿಲು ಮತ್ತು ಕೋಲಾರ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ಹಿರಿಯ ಭೂವಿಜ್ಞಾನಿ, ಖನಿಜ ವಿಭಾಗ, ಕೋಲಾರರವರ ತಾಂತ್ರಿಕ ಸಿಬ್ಬಂದಿ ಹಾಗೂ ಮುಳಬಾಗಿಲು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ೯ ಲಾರಿಗಳನ್ನು ಮತ್ತು ೧ ಟ್ರಾಕ್ಟರ್ನ್ನು ನಂಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತು ಕೋಲಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ೬ ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಗಳ ಸುಬರ್ದಿಗೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಧನ
ಕೋಲಾರ, ಮಾರ್ಚ್ ೦೬ :
೨೦೦೯-೧೦ನೇ ಸಾಲಿನ ತುಂತುರು ನೀರಾವರಿ ಯೋಜನೆಯಡಿ ಒಂದು ಹೆಕ್ಟೇರ್ ಪ್ರದೇಶದ ಘಟಕಕ್ಕೆ ೧೫೦೦೦/- ರೂ.ಗಳ ಸಹಾಯಧನವನ್ನು ನೀಡಲಾಗುತ್ತದೆ. ಆಸಕ್ತಿ ಇರುವ ರೈತರು ಮಾರ್ಚ್ ೧೦ ರೊಳಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ನಿರ್ದೇಶಕರು, ಕೋಲಾರರವರನ್ನು ಭೇಟಿ ಮಾಡಲು ಕೋರಲಾಗಿದೆ