ಭಟ್ಕಳ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.೧೨ ಸೋಮವಾರ ಸಂಜೆ ಭಟ್ಕಳದ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿತು.
ಪದಗ್ರಹಣ ಅಧಿಕಾರಿ ರೋಟರಿ ಜಿಲ್ಲೆ ೩೧೭೦ ದ ಮಾಜಿ ಜಿಲ್ಲಾ ಸಹಾಯಕ ಗವರ್ನರ ರೋ. ಡಾ. ಅನಂತಮೂರ್ತಿ ಶಾಸ್ತ್ರೀ ನೂತನ ಅಧ್ಯಕ್ಷ ರೋ. ಇಷ್ತಿಯಾಕ್ ಹಸ್ಸನ್ ರಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಲ್ಲಾ ಸಹಾಯಕ ಗವರ್ನರ ರೋ. ಮಾನ್ವೆಲ್ ಸ್ಟಿಫೆನ್ ರೋಡ್ರಿಗೀಸ್, ಜಿಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಭಟ್ಕಳ ತಾಲೂಕಿನಲ್ಲಿ ೨೦೨೩-೨೪ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಕುಮಾರಿ. ಮೈಮೂನಾ ಅಜಾಯಿಬ್ ರನ್ನು ಪಾಲಕರ ಸಹಿತ ಗೌರವಿಸಲಾಯಿತು. ತಾಲೂಕಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶಿಕ್ಷಣ ಪಡೆದ ಅಂಜುವiನ್ ನವಾಯತ್ ಕಾಲನಿಯ ಶಾಲೆಗೆ ಗೌರವ ಪ್ರಶಸ್ತಿಯನ್ನು ನೀಡಲಾಯಿತು.
೨೦೨೪-೨೫ ನೇ ಸಾಲಿಗೆ ಅಧ್ಯಕ್ಷರಾಗಿ ರೋ. ಇಷ್ತಿಯಾಕ್ ಹಸ್ಸನ್À, ಕಾರ್ಯದರ್ಶಿಯಾಗಿ ರೋ.ಡಾ. ಮೊಹಮ್ಮದ ಝಹೀರ ಕೋಲಾ, ಖಜಾಂಚಿಯಾಗಿ ರೋ. ಶ್ರೀನಿವಾಸ್ ಪಡಿಯಾರ್ ಸಹಿತ ಇತರ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ೫ ದಶಕಗಳಿಂದ ಸೇವೆ ಸಲ್ಲಿಸಿರುವ ಡಾ. ಸುರೇಶ ವಿ ನಾಯಕ, ೩೪ ವರ್ಷಗಳಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಭಟ್ಕಳದ ಹಲವಾರು ಯುವಕರನ್ನು ಕ್ರೀಡಾಪಟುವಾಗಿಸಿದ ಮಹಮ್ಮದ ನಿಜಾಮ್ ಮುಮ್ಮಿಗಟ್ಟಿ ಯವರನ್ನು ಸನ್ಮಾನಿಸಲಾಯಿತು.
ನಿರ್ಗಮನ ಅಧ್ಯಕ್ಷ ರೋ.ಡಾ.ಎಂ.ಎ.ಬಾವಿಕಟ್ಟಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ರೋ. ಶ್ರೀನಾಥ ಎಸ್ ಪೈ ವರದಿ ವಾಚಿಸಿದರು. ಹಿರಿಯ ರೋಟರಿಯನ್ ರಾಜೇಶ ನಾಯಕ ನಿರೂಪಿಸಿದರು, ಕಾರ್ಯದರ್ಶಿ ರೋ.ಡಾ. ಮೊಹಮ್ಮದ ಝಹೀರ ಕೋಲಾ ವಂದಿಸಿದರು.
ರೋಟರಿ ಪ್ರಮುಖರಾದ ಡಾ. ಗೌರೀಶ ಪಡುಕೋಣೆ, ಶಾಖೀರ್ ಹುಸೇನ್, ನಜೀರ್ ಕಾಶಿಂಜಿ, ರವಿ ನಂಬಿಯಾರ, ಪ್ರಶಾಂತ ಕಾಮತ ರೋಟರಾಕ್ಟ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸಮಾಜ ಸೇವಕರು, ಪಾಲಕರು, ಭಟ್ಕಳದ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.