ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಯುವಕ ನಾಪತ್ತೆ: ಮಾಹಿತಿಗಾಗಿ ಮನವಿ

ಭಟ್ಕಳ ಯುವಕ ನಾಪತ್ತೆ: ಮಾಹಿತಿಗಾಗಿ ಮನವಿ

Thu, 04 Jan 2024 18:09:26  Office Staff   S O News

ಕಾರವಾರ: ಮೊಹಮ್ಮದ ಸುಫೈಲ್(25 ವರ್ಷ), ತಿಲಕನಗರ, ಹಡೀನ್, ಸರ್ಪನಕಟ್ಟೆ, ಭಟ್ಕಳ ಇವರು ಡಿ.29 ರಂದು ರಾತ್ರಿ 11 ಗಂಟೆಯಿಂದ ಡಿ.30 ರಂದು ಬೆಳಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಯೋ ಹೋಗಿ ಮನೆಗೂ ಬಾರದೇ ಕಾಣೆಯಾಗಿದ್ದಾರೆ. 

ಕಾಣೆಯಾದ ವ್ಯಕ್ತಿಯ  ಚಹರೆ: ಉದ್ದನೆಯ ಮುಖ, ಗೋಧಿ ಮೈ ಬಣ್ಣ, ಸದೃಡ ಮೈಕಟ್ಟು, 5.8 ಅಡಿ ಎತ್ತರ, ಕನ್ನಡ, ಬ್ಯಾರಿ, ಇಂಗ್ಲಿಷ್, ಉರ್ದು ಮಾತನಾಡುತ್ತಾನೆ. ಹಸಿರು ಬಣ್ಣ ಟಿ ಶರ್ಟ್ ಕಪ್ಪು ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ಸಾರ್ವಜನಿಕರಿಗೆ ತಿಳಿದು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08385-227333, 9480805252, ಅಥವಾ ಕಾರವಾರ ಪೊಲೀಸ್ ಕಂಟ್ರೋಲ್ ರೂಂ ದೂ. ಸಂ. 08382-226550/112/100 ಸಂಪರ್ಕಿಸಬಹುದು ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: