ಭಟ್ಕಳ: ತಾಲೂಕಿನಾದ್ಯಂತ ಗುರುವಾರ ಸಂಜೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾದ್ದು, ಹಲವು ಕಡೆಗಳಲ್ಲಿ ಮನೆಯ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ.
ವೆಂಕ್ಟಾಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಸಣಕೂಸ ನಾಯ್ಕ ರವರ ಮನೆಯ ಮೇಲೆ ಅಡಿಕೆ ಮರ ಬಿದ್ದಿದೆ. ಮಾವಳ್ಳಿ 1 ಗ್ರಾಮದ ಮಂಗಳಿ ಬೈರ ಹರಿಕಾಂತ ಇವರ ಮನೆ ಮೇಲೆ ಸುರಿದ ಭಾರಿ ಗಾಳಿ ಮಳೆಗೆ ಮನೆಯ ಎದುರಿನ ಮೇಲ್ಚಾವಣಿ ಹಾನಿಯಾಗಿದೆ. ಗಾಳಿ ಮಳೆಗೆ ಶಿರಾಲಿ 1 ಗ್ರಾಮದ ಛಾಯಾ ಗಣಪತಿ ನಾಯ್ಕ ಇವರ ವಾಸ್ತ್ಯವದ ಮನೆ ಮೇಲೆ ಮರ ಬಿದ್ದು ಭಾಗಶಃ ಹನಿಯಾಗಿದ್ದು. ಮೋಹನ ಮಾಸ್ತಪ್ಪ ನಾಯ್ಕ ಮಣ್ಕುಳಿ ಇವರ ವಾಸ್ತವ್ಯದ ಪಕ್ಕಾ ಮನೆಯ ಮೇಲ್ಛಾವಣಿ ಗಾಳಿ ಮಳೆಯಿಂದ ಕುಸಿದಿದೆ. ಕುಪ್ಪಯ್ಯ ಜಟ್ಟಪ್ಪ ನಾಯ್ಕ ಹುರುಳಿಸಾಲ, ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.
ಹೆಬಳೆ ಗ್ರಾಮದ ನಾಯ್ಕರಕೇರಿ ಮಜಿರೆಯ ಶಿವಾನಂದ ನಾಯ್ಕ ಎಂಬುವರ ವಾಸ್ತವ್ಯದ ಮನೆಮುಂದೆ ಎರಡು ತೆಂಗಿನಮರಗಳು ಬಿದ್ದಿದೆ. ಶಿರಾಲಿ2 ಗ್ರಾಮದ ಕೋಟೆಬಾಗಿಲು ಮಜಿರೆಯ ರವಿ ನಾಗಪ್ಪ ನಾಯ್ಕ ಇವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಸಂಜೆ ಬೀಸಿದ ಬಿರುಗಾಳಿಗೆ ನ್ಯಾಯಾಲಯದ ಆವರಣ್ದದಲ್ಲಿ ಇದ್ದ ಮರವೊಂದು ಉರುಳಿ ಬಿದ್ದಿದೆ. ಸಂಜೆಯಾದ್ದರಿಂದ ನ್ಯಾಯಾಲಯದ ಆವರಣದಲ್ಲಿ ಜಾಸ್ತಿ ವಾಹನ ಇಲ್ಲದೆ ಇರುವದರಿಂದ ಯಾವುದೆ ಹಾನಿ ಸಂಭವಿಸಿಲ್ಲ.