ಬೆಂಗಳೂರು, ಅ.೬: ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಭೀಕರ ಮಳೆಯಿಂದಾಗಿ ಉಂಟಾದ ನೆರೆ ಹಾವಳಿಯಿಂದ ಬೃಹತ್ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದ್ದು, ರಾಜ್ಯದ ೧೦ ಸಾವಿರ ಹಾಗೂ ಆಂಧ್ರದ ೧೫ ಸಾವಿರ ಕುಟುಂಬಗಳಿಗೆ ನೆರವಾಗಲು ಚರ್ಚ್ನ ಸಂಘಟನೆಗಳು ಮುಂದಾಗಿವೆ.
ಕಾರಿಟಸ್ ಇಂಡಿಯಾ ಮತ್ತು ಕೆಆರ್ಓಎಸ್ಎಸ್( ಕರ್ನಾಟಕ ರೀಜನಲ್ ಆರ್ಗನೈಝೇಷನ್ ಫಾರ್ ಸೋಷಿಯಲ್ ಸರ್ವೀಸಸ್) ಸಂಘಟನೆಗಳು ಸಂತ್ರಸ್ತರ ನೆರವಿಗೆ ಧಾವಿಸಲಿವೆ ಎಂದು ಆರ್ಚ್ ಬಿಷಪ್ ಬರ್ನಾಡ್ ಮೋರಸ್ ತಿಳಿಸಿದ್ದಾರೆ.
ಈ ಸಂಘಟನೆಗಳ ವತಿಯಿಂದ ನೆರೆ ಹಾವಳಿಯಿಂದ ತತ್ತರಿಸಿರುವ ಜನತೆಗೆ ವೈದ್ಯಕೀಯ, ಆಹಾರ, ಬಟ್ಟೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಸಂಬಂಧ ಮಂಗಳವಾರ ಬೆಳಗಾವಿಯಲ್ಲಿ ವಿವಿಧ ಚರ್ಚ್ಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಲ್ಲದೆ, ಸುಮಾರು 750 ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರಕಾರಗಳ ಸಹಯೋಗದಲ್ಲಿ ಕನಿಷ್ಠ 1000 ಮನೆಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿರುವುದಾಗಿ ಬರ್ನಾಡ್ ಮೋರಸ್ ತಿಳಿಸಿದ್ದಾರೆ.