ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಪೊಲೀಸರ ಕಾರ್ಯಾಚರಣೆ: 9.ಕೆಜಿ ಗಾಂಜಾ ವಶ: ಮೂವರ ಬಂಧನ: ಓರ್ವ ಆರೋಪಿ ಪರಾರಿ

ಭಟ್ಕಳ ಪೊಲೀಸರ ಕಾರ್ಯಾಚರಣೆ: 9.ಕೆಜಿ ಗಾಂಜಾ ವಶ: ಮೂವರ ಬಂಧನ: ಓರ್ವ ಆರೋಪಿ ಪರಾರಿ

Mon, 11 Nov 2024 04:25:55  Office Staff   S O News

ಭಟ್ಕಳ: ಖಚಿತ ಮಾಹಿತಿ ಮೆರೆಗೆ  ಅಕ್ರಮವಾಗಿ ಕಾರಿನಲ್ಲಿ 9 ಕೆಜಿ 170 ಗ್ರಾಂ  ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪೊಲೀಸರು  ಭೇಟೆಯಾಡುವಲ್ಲಿ ಯಶಸ್ವಿಯಾಗಿದ್ದು. ಓರ್ವ ಅರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಂಧಿತ ಆರೋಪಿಗಳನ್ನು ಸಯ್ಯದ ಅಕ್ರಮ ತಂದೆ ಮಹ್ಮಮದ ಹುಸೇನ್ (24), ಅಬ್ದುಲ್ ರೆಹಮಾನ್ ತಂದೆ ಸಲಿಂ ಶಾಬ್ ಶೇಖ್(27) ಗುಳ್ಮಿ, ಕಾರು ಚಾಲಕ ಅಜರುದ್ದೀನ್ ತಂದೆ  ಮೆಹಬೂಬ್ ಶಾಬ್ (41 ) ಕಸ್ತೂರಬಾ ನಗರ ಶಿರಸಿ, ನಾಪತ್ತೆಯಾದ ಆರೋಪಿ ಖಾಸಿಂ ತಂದೆ  ಅಬುಮಹ್ಮಮದ್ ಉಸ್ಮನ ನಗರ 2 ಕ್ರಾಸ್ ಎಂದು ಗುರುತಿಸಲಾಗಿದೆ. ಇವರು ಒರಿಸ್ಸಾ ಮೂಲದಿಂದ ಹೊನ್ನಾವರ ಕಡೆಯಿಂದ ಭಟ್ಕಳಕ್ಕೆ ಹುಂಡೈ  ಕಂಪನಿಯ ಕಾರಿನ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ .ಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ  ತೆಂಗಿನಗುಂಡಿ ಕ್ರಾಸ್ ಸಮೀಪ ಕಾರು ತಡೆದು 4 ಲಕ್ಷ  50 ಸಾವಿರ ಮೌಲ್ಯದ 9 ಕೆಜಿ 170 ಗ್ರಾಂ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ  ಹುಂಡೈ ಕಂಪನಿಯ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ನಾರಾಯಣ  ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಸಿ.ಟಿ. ಜಯಕುಮಾರ ಮತ್ತು ಜಗದೀಶ.ಎಂ ,ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ.  ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆ‌ರ್.
ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಎ ಎಸ್.ಐ ಗೋಪಾಲ ನಾಯ್ಕ,ಸಿಬ್ಬಂದಿಗಳಾದ ಜಯರಾಮ ಹೊಸಕಟೇ,ಉದಯ ನಾಯ್ಕ, ಗಿರೀಶ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪೆಮಾರ್, ದೀಪಕ ನಾಯ್ಕ ,ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು.

ಈ ಬಗ್ಗೆ ಭಟ್ಕಳ  ನಗರ ಠಾಣೆಯಲ್ಲಿ ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.


Share: