ಭಟ್ಕಳ: ಭಟ್ಕಳ ಪುರಸಭೆಯ ಉಪಾಧ್ಯಕ್ಷ ಹಾಗೂ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಮತ್ತು ಬುಧವಾರ ನಡೆದ ಚುನಾವಣೆಯಲ್ಲಿ ತಂಝೀಮ್ ಸಂಸ್ಥೆ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
Hafsha Kazia President Jali Pattan Panchayat
ಹಿಂದುಳಿದ ವರ್ಗ ಕ್ಕೆ ಮೀಸಲಾಗಿದ್ದ ಭಟ್ಕಳ ಉಪಾಧ್ಯಕ್ಷ ಸ್ಥಾನಕ್ಕೆ ಮುಹಿದ್ದೀನ್ ಅಲ್ತಾಫ್ ಖರೂರಿ ಅವಿರೋಧವಾಗಿ ಆಯ್ಕೆಗೊಂಡರೆ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ (ಮಹಿಳಾ ಸಾಮಾನ್ಯ) ಕ್ಕೆ ಹಫ್ಷಾ ಕಾಜಿಯಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೈಯ್ಯದ್ ಇಮ್ರಾನ್ ಲಂಕಾ ಬುಧವಾರ ಅವಿರೋಧವಾಗಿ ಆಯ್ಕೆಗೊಂಡರು.
Syed Imran Lanka Vice President Jali PP
ಚುನಾವಣಾಧಿಕಾರಿಯಾಗಿ ಭಟ್ಕಳ ತಹಸಿಲ್ದಾರ ನಾಗರಾಜ್ ಅವರು ಕರ್ತವ್ಯ ನಿರ್ವಹಿಸಿದ್ದರು.
ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ್ ನಲ್ಲಿ ತಂಝೀಮ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದರಿಂದಾಗಿ ಇಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ತಂಝೀಮ್ ಸೂಚಿಸಿದ ಅಭ್ಯರ್ಥಿಯೇ ಆಯ್ಕೆಯಾಗುತ್ತಾರೆ. ಪಂಚಾಯತ್ ಹಾಗೂ ಪುರಸಭೆಯಲ್ಲಿ ಬಹುತೇಕ ಸದಸ್ಯರು ಅವಿರೋಧವಾಗಿಯೆ ಆಯ್ಕೆಯಾಗುತ್ತಾರೆ ಎನ್ನುವುದು ಭಟ್ಕಳದ ಒಂದು ವಿಶೇಷತೆಯಾಗಿದೆ.