ಮಂಗಳೂರು, ಮಾ.೧೫: ‘ಬೈಬಲ್ ಹಗಲಿರುಳು’ ಕಾರ್ಯಕ್ರಮಕ್ಕೆ ಮಂಗಳೂರು ಬಿಷಪ್ ರೈ.ರಾ.ಡಾ. ಎಲೋಶಿಯಸ್ ಪೌಲ್ ಡಿಸೋಜ ಕುಲಶೇಖರ ಕೊರ್ಡೆಲ್ನ ಪವಿತ್ರ ಶಿಲುಬೆಯ ದೇವಾಲಯದಲ್ಲಿ ಇಂದು ಸಂಜೆ ಚಾಲನೆ ನೀಡಿದರು.
ಈ ಸಂದರ್ಭ ಭಗಿನಿ ವಿಲ್ವಾರ್ಟಾ ಬಿ.ಎಸ್., ನಿಕಟ ಪೂರ್ವ ಧರ್ಮಗುರುಗಳಾದ ರೆ.ಫಾ. ವಲೇರಿಯನ್ ಡಿಸೋಜ, ರೆ.ಫಾ. ಜಿ.ಡಬ್ಲು ವಾಸ್., ಧರ್ಮಗುರು ವಲೇರಿಯನ್ ಪಿಂಟೋ, ಸಂಚಾಲಕ ಸುಶೀಲ್ ನೊರೊನ್ಹ, ಉಪಾಧ್ಯಕ್ಷ ವಿಕ್ಷರ್ ವಾಸ್., ಕಾರ್ಯದರ್ಶಿ ಜಾರ್ಜ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕೊಂಕಣಿ ಭಾಷೆಯಲ್ಲಿ ‘ಬೈಬಲ್ ಹಗಲಿರುಳು’ ಕಾರ್ಯಕ್ರಮ ಇಂದಿನಿಂದ ಮಂಗಳವಾರ ಸಂಜೆ ೬ ಗಂಟೆಯವರೆಗೆ ನಿರಂತರವಾಗಿ ನೆರವೇರಲಿದ್ದು, ಸುಮಾರು ೩ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.