ಮಂಗಳೂರು: ಮೇಯರ್ರವರ ಕಾರು ಹಾಗೂ ಮನೆಗೆ ಕಲ್ಲು ಎಸೆದಿರುವ ಪ್ರಕರಣದ ಕುರಿತು ಕಾವೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಿಂದೂ ಯುವ ಜಾಗೃತಿ ಸಮಾವೇಶ ನಡೆಯಲಿದ್ದು, ನಿಧಿ ಸಂಗ್ರಹಣೆ ಗಾಗಿ ದುರ್ಗಾ ವಾಹಿನಿಯ ಸದಸ್ಯೆಯರು ಮೊನ್ನೆ ಮೇಯರ್ ಶಂಕರ್ ಭಟ್ ಬಳಿ ತೆರಳಿದ್ದು, ಧನ ಸಹಾಯ ಮಾಡದೆ ಮೇಯರ್ ಅವರನ್ನು ವಾಪಸ್ ಕಳುಹಿಸಿದ್ದರು.
ಇದರಿಂದ ಬಜರಂಗದಳದ ಕಾರ್ಯ ಕರ್ತರು ಆಕ್ರೋಶಗೊಂಡಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಮೇಯರ್ರವರ ಕಾರು ಹಾಗೂ ಮನೆಯ ಗಾಜುಗಳಿಗೆ ಕಲ್ಲು ತೂರ ಲಾಗಿದ್ದು ಇದು ಬಜರಂಗದಳದ ಕೃತ್ಯ ವೆಂದು ಶಂಕಿಸಲಾಗಿದೆ. ಆದರೂ ಯಾವುದೇ ಸಂಘ ಟನೆಯನ್ನು ಬೊಟ್ಟು ಮಾಡದ ಮೇಯರ್ ದುಷ್ಕರ್ಮಿಗಳು ಮನೆ ಹಾಗೂ ಕಾರಿಗೆ ಹಾನಿ ಗೊಳಿಸಿದ್ದಾರೆಂದು ದೂರು ನೀಡಿದ್ದಾರೆ.