ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬಿತ್ತನೆ ಬೀಜಕ್ಕೆ ಕೃಷಿ ಸಬ್ಸಿಡಿ ಕಡಿತ

ಬೆಂಗಳೂರು: ಬಿತ್ತನೆ ಬೀಜಕ್ಕೆ ಕೃಷಿ ಸಬ್ಸಿಡಿ ಕಡಿತ

Fri, 30 Apr 2010 05:32:00  Office Staff   S.O. News Service
ಬೆಂಗಳೂರು, ಏಪ್ರಿಲ್ ೩೦: ರಾಜ್ಯದಲ್ಲಿ ಮುಂಗಾರು ಪೂರ್ವದ ಗುಡುಗು, ಮಿಂಚು ಆಗೀಗ ಬಿರುಮಳೆ ಇವೆಲ್ಲಾ ಈಗ ಶುರುವಾಗಿದೆ. ರೈತರು ಮುಂದಿನ ಉಳುಮೆ, ಬಿತ್ತನೆ ಅಂತ ಯೋಚಿಸುವ ಯೋಜಿಸುವ ಹೊತ್ತು ಇದು.ರಾಜ್ಯ ಬಿಜೆಪಿ ಸರ್ಕಾರ ಮಾತ್ರ ತನ್ನದೇ ಆದ ಎಂದಿನ ದಾರಿಯಲ್ಲಿ ಹೊರಟಿದೆ. ಅದೀಗ ರೈತರಿಗೆ ಕೃಷಿ ಸಬ್ಸಿಡಿ ಕಡಿತ ಮಾಡಲು ಕೃಷಿ ಇಲಾಖೆಗೆ ಸೂಚಿಸಿದೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಬಾರಿ ಘೋಷಣೆ ಮಾಡಿದ್ದ ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇ.75 ಸಹಾಯಧನ ನೀಡಿ ಬಿತ್ತನೆ ಬೀಜವನ್ನು ಕೊಡುವುದಾಗಿ ಹೇಳಿದ್ದು ಬರೀ ಆರಂಭ ಶೂರತ್ವ ಮಾತ್ರ ಎಂಬುದು ಸಾಬೀತಾಗಿದೆ. ಏಕೆಂದರೆ ಪ್ರಸ್ತುತ ಸಾಲಿನಲ್ಲಿ ಈ ಬೀಜ ಸಬ್ಸಿಡಿಯನ್ನು ಶೇ.25ಕ್ಕೆ ಮಿತಿಗೊಳಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.ಇದಲ್ಲದೆ ಟ್ರಾಕ್ಟರ್ ಖರೀದಿಗೆ ನೀಡಲಾಗುತ್ತಿದ್ದ 60 ಸಾವಿರ ಸಹಾಯಧನವನ್ನು ಕಡಿತಗೊಳಿಸಲು ಸಹ ಸರ್ಕಾರ ಸೂಚನೆ ನೀಡಿದೆಯೆಂಬ ವರದಿಗಳಿವೆ. ತೋಟಗಾರಿಕಾ ಇಲಾಖೆಯ ಮೂಲಕ ಸೂಕ್ಷ್ಮ ನೀರಾವರಿ ಯೋಜನೆಗಳು ಹಾಗೂ ಕೃಷಿ ಯಾಂತ್ರೀಕರಣಕ್ಕೆ ನೀಡಲಾಗುವ ಸಹಾಯಧನವನ್ನು ಕೇವಲ ಕೇಂದ್ರ ಸಕರ್ರದ ಸಹಾಯಧನಕ್ಕಷ್ಟೇ ಸೀಮಿತಗೊಳಿಸಬೇಕು, ರಾಜ್ಯಸಕರ್ಾರ ಸಹಾಯಧನ ಕಡಿತ ಮಾಡಿ ಎಂದು ಸರ್ಕಾರ ಸೂಚಿಸಿದಂತೆ. ಈ ಯಾವುದರ ಬಗ್ಗೆಯೂ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಲು ಸಿದ್ಧವಿಲ್ಲ. ಅನಧಿಕೃತ ಟಿಪ್ಪಣಿಯ ಮೂಲಕ ರಾಜ್ಯ ಸರ್ಕಾರ ಈ ಸೂಚನೆ ನೀಡಿದೆ. ಬಹುಶ: ಪಂಚಾಯ್ತಿ ಚುನಾವಣೆಗಳು ಮುಗಿದ ಮೇಲೆ ಅಧಿಕೃತ ಸೂಚನೆ ಹೊರಬೀಳುತ್ತದೋ ಏನೋ, ಕಾದು ನೋಡಬೇಕಿಕಾದೆ. ಸೌಜನ್ಯ: ಜನಶಕ್ತಿ

Share: