ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಟೆಂಡರ್ ಪಡೆದು ವರ್ಷ ಕಳೆದರೂ ಕಾಮಗಾರಿ ಆರಂಭಿಸಿದ ಗುತ್ತಿಗೆದಾರನ ವಿರುದ್ದ ಕ್ರಮಕ್ಕೆ ‌ಆಗ್ರಹ

ಭಟ್ಕಳ:ಟೆಂಡರ್ ಪಡೆದು ವರ್ಷ ಕಳೆದರೂ ಕಾಮಗಾರಿ ಆರಂಭಿಸಿದ ಗುತ್ತಿಗೆದಾರನ ವಿರುದ್ದ ಕ್ರಮಕ್ಕೆ ‌ಆಗ್ರಹ

Sat, 05 Oct 2024 06:46:20  Office Staff   SO News

ಭಟ್ಕಳ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಕಾಮಗಾರಿ ಟೆಂಡರ್ ಪಡೆದು ವರ್ಷ ಕಳೆದರೂ ಕಾಮಗಾರಿ ಆರಂಭಿಸದ ಗುತ್ತಿಗೆದಾರನ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿ ಆಸರಕೇರಿ, ಸೋನಾರಕೇರಿ ನಿವಾಸಿಗಳು ಶುಕ್ರವಾರ ಪುರಸಭೆ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭೆ ಸದಸ್ಯ ಶ್ರೀಕಾಂತ ನಾಯ್ಕ ಆಸರಕೇರಿ ಪಟ್ಟಣದ ಸೋನಾರಕೇರಿ, ಆಸರಕೇರಿಯ ಮುಖ್ಯ ರಸ್ತೆಯ ಮರುಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿ 2ವರ್ಷ ಕಳೆದರೂ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಆರಂಭಿಸಿಲ್ಲ. ನಗರ ಭಾಗದ ಅತೀಹೆಚ್ಚೂ ಜನರು ಓಡಾಡುವ ರಸ್ತೆ ಇದಾಗಿದ್ದು, ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರು ದಿನನಿತ್ಯ ಓಡಾಡುವುದು ದುಸ್ತರವಾಗಿದೆ. ಈ ಎರಡು ಗ್ರಾಮಗಳ ಜಾತ್ರೆ ಉತ್ಸವ ಹಾಗು ಭಜನಾ ಕಾರ್ಯಕ್ರಮಗಳು ಪ್ರತಿ ನಡೆಯುತ್ತಲಿದ್ದು, ಹದೆಗಟ್ಟ ರಸ್ತೆಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗುತ್ತಿದೆ. ಇದೇ ಯೋಜನೆಯಡಿ ಗುತ್ತಿಗೆದಾರ ಈಹಿಂದೆ ಈ ಭಾಗದಲ್ಲಿ ಮಾಡಿದ ಕಾಂಕ್ರೀಟ ರಸ್ತೆಯ ಕಾಮಗಾರಿಯೂ ತೀರಾ ಕಳಪೆ ಮಟ್ಟದಾಗಿದ್ದು, ಇದರ ಬಗ್ಗೆ ಮಾಹಿತಿ ಇದ್ದರೂ ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಿಲ್ಲ ಎಂದರು.

ಇನ್ನೋರ್ವ ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿ ಪುರಸಭೆಯ ಒಳರಚರಂಡಿ ಛೇಂಬರ ಕಳಪೆ ಕಾಮಗಾರಿಯಿಂದಾಗಿ ತ್ಯಾಜ್ಯ ನೀರು ಬಾವಿಗಳಿಗೆ ನೀರು ಕಲುಷಿತಗೊಂಡಿದ್ದು, ಸ್ಥಳೀಯರು ಶುದ್ದ ನೀರಿಗಾಗಿ ಅಲೆದಾಡುವ ಸ್ಥಿತಿ ಉದ್ಭವವಾಗಿದೆ. ಶಂಸುದ್ದೀನ ಸರ್ಕಲ ಮೂಲಕ ಹರಿದು ಬರುವ ಒಳಚರಂಡಿ ನೀರು ಮೇಲ್ಗಡೆ ಮಾರ್ಗವಾಗಿ ಹರಿಯಲು ಅವಕಾಶ ಇದ್ದರೂ ಆಸರಕೇರಿ ರಸ್ತೆಯ ಮೂಲಕ ಕೆಳಭಾಗದಲ್ಲಿ ಹರಿದು ಬರುವಂತೆ ಮಾಡಿ ಛೇಂಬರನಲ್ಲಿ ನೀರಿನ ಒತ್ತಡ ಜಾಸ್ತಿ ಯಾಗಿ ಸೋರಿಕೆಯಾಗುವಂತೆ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರು ನಿತ್ಯ ತ್ಯಾಜ್ಯ ನೀರು ಕುಡಿಯುವಂತಾಗಿದ್ದು, ಪುರಸಭೆ ಈ ಕೂಡಲೇ ಇದರ ಬಗ್ಗೆ ಕ್ರಮವಹಿಸಿದಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ನಗರೋತ್ಥಾನ ಹಾಗು ಒಳಚರಂಡಿ ಎರಡು ಕಾಮಗಾರಿಗಳ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು. ¸ಪುರಸಭೆ ಸದಸ್ಯ ರಾಘವೇಂದ್ರ ಶೇಟ್, ಸ್ಥಳೀಯರಾದ ಪಾಂಡುರಗ ನಾಯ್ಕ, ಪ್ರಕಾಶ ನಾಯ್ಕ, ರಾಮಚಂದ್ರ ನಾಯ್ಕ, ವಸಂತ ನಾಯ್ಕ, ಕೇಶವ ನಾಯ್ಕ, ರಾಜೇಶ ಮಹಾಲೆ, ಜಗದೀಶ ಮಹಾಲೆ ಇತರರು ಇದ್ದರು.


Share: