ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಪ್ರವಾಸ ಕಾರ್ಯಕ್ರಮ

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ಪ್ರವಾಸ ಕಾರ್ಯಕ್ರಮ

Sat, 05 Dec 2009 02:49:00  Office Staff   S.O. News Service
ಚಿಕ್ಕಬಳ್ಳಾಪುರ, ಡಿಸೆಂಬರ್ 03: ಜಿಲ್ಲಾಧಿಕಾರಿ ಅನ್ವರ್ ಪಾಷ ರವರ ಡಿಸೆಂಬರ್ ತಿಂಗಳಿನ ಒಂದನೇ ಪಾಕ್ಷಿಕ ತಾತ್ಕಾಲಿಕ ಪ್ರವಾಸ ವಿವರಗಳು.
ಜಿಲ್ಲಾಧಿಕಾರಿಗಳು ಡಿಸೆಂಬರ್ ೫ ರಂದು ಕೇಂದ್ರ ಸ್ಥಾನದಲ್ಲಿದ್ದು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜೊತೆ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ನಂತರ ಕಛೇರಿ ಕೆಲಸ ಕಾರ್ಯಕ್ರಮಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು.

ಡಿಸೆಂಬರ್ ೭ ರಂದು ಕೇಂದ್ರ ಸ್ಥಾನದಲ್ಲಿದ್ದು ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ನ್ಯಾಯಾಲಯ ಪ್ರಕರಣಗಳನ್ನು ನಡೆಸುವರು.ಡಿಸೆಂಬರ್ ೮ ರಂದು ಕೇಂದ್ರ ಸ್ಥಾನದಲ್ಲಿದ್ದು ಬೆಳಿಗ್ಗೆ ೧೧ ಗಂಟೆಗೆ ರಸ್ತೆ ಸುರಕ್ಷತಾ ಸಭೆ ನಡೆಸುವರು, ನಂತರ ಕಛೇರಿ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ಗೌರಿಬಿದನೂರು ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕು ಕಛೇರಿಯ ಕೆಲಸ ಕಾರ್ಯಗಳ ಪರಿಶೀಲನೆ, ನೆಮ್ಮದಿ ಕೇಂದ್ರ ಭೇಟಿ ಗಣಕೀಕರಣ ಕೆಲಸಗಳ ಪರಿಶೀಲನೆ, ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಡೆಸುವರು.

ಆಸ್ಪತ್ರೆ ಹಾಗೂ ಹಾಸ್ಟಲ್‌ಗೆ ಭೇಟಿ ನೀಡುವರು, ತಾಲ್ಲೂಕು ಸರ್ವೇಯರ್, ರಾ.ನಿ. ಮತ್ತು ಗ್ರಾ.ಲೆ. ಕುರುಬರಹಳ್ಳಿ, ಚಂದನದೂರು ದಫ್ತರ್ ತಪಾಸಣೆ ನಡೆಸುವರು.                    
ಡಿಸೆಂಬರ್ ೯ ರಂದು ಕೇಂದ್ರ ಸ್ಥಾನದಲ್ಲಿದ್ದು ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ನ್ಯಾಯಾಲಯ ಪ್ರಕರಣಗಳನ್ನು ನಡೆಸುವರು. ಡಿಸೆಂಬರ್ ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಆರ್.ಟಿ.ಎ.ಸಭೆ ನಡೆಸುವರು, ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ಗುಡಿಬಂಡೆ ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕು ಕಛೇರಿಯ ಕೆಲಸ ಕಾರ್ಯಗಳ ಪರಿಶೀಲನೆ, ನೆಮ್ಮದಿ ಕೇಂದ್ರ ಭೇಟಿ ಗಣಕೀಕರಣ ಕೆಲಸಗಳ ಪರಿಶೀಲನೆ, ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಡೆಸುವರು. ಆಸ್ಪತ್ರೆ ಹಾಗೂ ಹಾಸ್ಟಲ್‌ಗೆ ಭೇಟಿ ನೀಡುವರು, ತಾಲ್ಲೂಕು ಸರ್ವ್ಭೆಯರ್, ರಾ.ನಿ. ಮತ್ತು ಗ್ರಾ.ಲೆ. ದಪ್ಪರ್ತಿ, ಹಂಪಸಂದ, ದಫ್ತರ್ ತಪಾಸಣೆ ನಡೆಸುವರು.
 
ಡಿಸೆಂಬರ್ ೧೧ ರಂದು ಕೇಂದ್ರ ಸ್ಥಾನದಲ್ಲಿದ್ದು ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಕೆಲಸ ಕಾರ್ಯಗಳ ಪರಿಶೀಲನೆ, ತಾಲ್ಲೂಕು ಕಛೇರಿ ಭೇಟಿ ಕೆಲಸ ಕಾರ್ಯಗಳ ಪರಿಶೀಲನೆ, ಉಪವಿಭಾಗಾಧಿಕಾರಿಗಳ ಕಛೇರಿಗೆ ಭೇಟಿ ಕಛೇರಿಯ ಸ್ಥೂಲ ತಪಾಸಣೆ ನಡೆಸುವುದು. ನಂತರ ಅಭಿವೃದ್ಧಿ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುವರು.
 
ಡಿಸೆಂಬರ್ ೧೪ ರಂದು ಕೇಂದ್ರ ಸ್ಥಾನದಲ್ಲಿದ್ದು ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ನ್ಯಾಯಾಲಯ ಪ್ರಕರಣಗಳನ್ನು ನಡೆಸುವರು.
 
ಡಿಸೆಂಬರ್ ೧೫ ರಂದು ಕಛೇರಿಯ ಕೆಲಸ ಕಾರ್ಯಗಳನ್ನು ನೋಡಿಕೊಂಡು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವರು. ಮಧ್ಯಾಹ್ನ ಚಿಂತಾಮಣಿ ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕು ಕಛೇರಿಯ ಕೆಲಸ ಕಾರ್ಯಗಳ ಪರಿಶೀಲನೆ, ಗಣಕೀಕರಣ ಕೆಲಸಗಳ ಪರಿಶೀಲನೆ, ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ, ಪ,ಜಾತಿ/ಪ.ಪಂಗಡ ಹಾಸ್ಟಲ್‌ಗಳಿಗೆ ಭೇಟಿ ಪರಿಶೀಲನೆ ನಡೆಸುವರು. ನಗರಸಭೆಗೆ ಭೇಟಿ, ಕುಡಿಯುವ ನೀರು ಹಾಗೂ ಅಭಿವೃದ್ದಿ ಕೆಲಸಗಳ ಪರಿಶೀಲನೆ, ತಾಲ್ಲೂಕು ಸರ್ವೇಯರ್, ರಾ.ನಿ. ಕಸಬಾ ಹಾಗೂ ಆಲಂvರಿ, ಊಲವಾಡಿ ದಫ್ತರ್ ತಪಾಸಣೆ ನಡೆಸುವರು.

ಮಂಚನಬಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ
 
ತಾಲ್ಲೂಕಿನ ಕಸಬ ಹೋಬಳಿಯ ಮಂಚನಬಲೆ ಗ್ರಾಮ ಪಂಚಾಯತ್ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಡಿಸೆಂಬರ್ ೫ ರಂದು ಶನಿವಾರ ಬೆಳಿಗ್ಗೆ ೧೦.೩೦ ಗಂಟೆಗೆ ಏರ್ಪಡಿಸಲಾಗಿದೆ.
    
ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ರವರು ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯಗಳನ್ನು ಪರಿಹಾರ ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಗ್ರಾಮಗಳ ಮೂಲಭೂತ ಸಮಸ್ಯೆಗಳ ಬಗ್ಗೆ ಸಮಸ್ಯೆಗಳನ್ನು ತಿಳಿಸಬಹುದು.


Share: