ಕಾರವಾರ, ಅಕ್ಟೋಬರ್ 12: ಕಳೆದ ಶುಕ್ರವಾರ ನಗರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕಾರವಾರದ ಬಿಷಪ್ ಡಾ. ಡೆರೆಕ್ ಫೆರ್ನಾಂಡಿಸ್ ರವರು ಸಂತ್ರಸ್ತರನ್ನು ಕಂಡು ತಮ್ಮ ಸಾಂತ್ವಾನವನ್ನು ವ್ಯಕ್ತಪಡಿಸಿದರು.
ನೆರೆಯಿಂದ ಮನೆಗಳನ್ನು ಕಳೆದುಕೊಂಡ ಆರ್ಥಿಕವಾಗಿ ದುರ್ಬಲರಾದ ನೂರು ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಅವರು ವಾಗ್ದಾನ ನೀಡಿದರು. ಬಳಿಕ ಸಂತ್ರಸ್ತರಿಗೆ ಆಹಾರಧಾನ್ಯಗಳನ್ನು ಅವರು ದಾನವಾಗಿ ವಿತರಿಸಿದರು.
ಕಳೆದ ಗುರುವಾರದಂದು ಅವರು ಬೆಳಗಾವಿಯಲ್ಲಿ ನಡೆದ ಎನ್.ಜಿ.ಒ. ಸಭೆಯಲ್ಲಿ ನೆರೆ ಸಂತ್ರಸ್ತರ ಬವಣೆಯನ್ನು ಪ್ರಸ್ತಾಪಿಸಿ ಅರ್ಹ ನೂರು ಕುಟುಂಬಗಳಿಗೆ ಮನೆಕಟ್ಟಿಸಿಕೊಡಲು ನೆರವನ್ನು ಯಾಚಿಸಿದ್ದರು.
The Karwar Diocesan Development Council (KDDC) ಸಂಘಟನೆ ನಷ್ಟದ ವಿವರವನ್ನು ಕಲೆಹಾಕಲಿದ್ದು ಅರ್ಹರನ್ನು ಗುರುತಿಸುವ ಕಾರ್ಯನಿರ್ವಹಿಸಲಿದೆ. ಬಿಷಪ್ ನವರೊಂದಿಗೆ ಕಾರಿಟಾಸ್ ಇಂಡಿಯಾ ಮತ್ತು ಕ್ರಾಸ್ ಸಂಸ್ಥೆಯ ಅಧಿಕಾರಿಗಳೂ ನೆರೆಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದರು.