ಭಟ್ಕಳ:೮, ಆಟೋ ರಿಕ್ಷಾ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಪಾದಾಚಾರಿಯೋರ್ವ ಸೇರಿದಂತೆ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ೭ ಗಂಟೆಗೆ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯ ಬೇಂಗ್ರೆ ಮಾವಿನ ಕಟ್ಟೆ ರಾ.ಹೆ.೧೭ರಲ್ಲಿ ಜರುಗಿದೆ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಪಾದಚಾರಿ ಚೆನ್ನಯ್ಯ ಬೇಂಗ್ರೆ(೬೦) ಬೈಕ್ ಸವಾರ ನಾಗೇಶ್ ಪುಜಾರಿ ಶೀರೂರು,ಬೈಕ್ ಹಿಂಬದಿ ಸವಾರ ಅಬ್ದುಲ್ ವಹಾಬ್ ಅಲಿಯಾಸ್ ನನ್ನು(೨೪) ಎಂದು ಗುರುತಿಸಲಾಗಿದ್ದು ಇವರನ್ನು ಭಟ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳ ಕಿದ್ವಾಯಿ ರಸ್ತೆಯ ಆಯಿಶಾ ಮುಹಿದ್ದೀನ್ (೬೫) ಇರ್ಷಾದ್(೬) ಹಾಗೂ ರಿಕ್ಷಾ ಚಾಲಕ ಕೇಶವ ನಾಗಪ್ಪ ನಾಯ್ಕ(೨೬) ಸಣ್ಣ ಪುಟ್ಟ ಗಾಯಗಳಾಗಿವೆ. ಆಯೀಶಾ ಮುಹಿದ್ದೀನ್ ಎಂಬುವರ ಕಾಲಿಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞೆಯನ್ನು ಕಳೆದುಕೊಂಡಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.