ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ 6 ಜನ ನಕಲಿ ಉಗ್ರರ ಬಂಧನ

ಭಟ್ಕಳ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ 6 ಜನ ನಕಲಿ ಉಗ್ರರ ಬಂಧನ

Thu, 17 Oct 2024 19:05:08  Office Staff   so news

ಭಟ್ಕಳ: ಭಟ್ಕಳ ಕರಾವಳಿ ಕಾವಲು ಪೊಲೀಸರು ಸಮುದ್ರ ಮೂಲಕ ನುಸುಳಿಕೊಂಡು ಬರುತ್ತಿದ್ದ ಆರು ಜನ ನಕಲಿ ಭಯೋತ್ಪಾದಕರನ್ನು ಗುರುವಾರ ಬೆಳಗಿನ ಜಾವ 1.30 ರ ಸುಮಾರಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರಾವಳಿ ಭಾಗದಲ್ಲಿ ರಕ್ಷಣೆ ಮತ್ತು ಭದ್ರತೆ ಕುರಿತು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅ.16 ಮತ್ತು 17 ರಂದು ರಕ್ಷಣಾ ವ್ಯವಸ್ಥೆಯ ಅಣಕು ಪ್ರದರ್ಶನ ‘ಸಾಗರ ಕವಚ’ ವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ರಾಜ್ಯದ ಕರಾವಳಿ ಕಾವಲು ಪಡೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗುತ್ತು

ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕರಾವಳಿ ಕಾವಲು ಪೊಲೀಸ್ ಕಟ್ಟೆಚ್ಚರದಿಂದ ತಪಾಸಣೆ ಮಾಡುತ್ತಿದ್ದ ವೇಳೆ ಸಮುದ್ರ ಮಾರ್ಗದಿಂದ ನುಸುಳುತ್ತಿದ್ದ 6 ಜನ ನಕಲಿ ಭಯೋತ್ಪಾದಕರನ್ನು ಭಟ್ಕಳ ಕರಾವಳಿ ಪೊಲೀಸರು ಗುವರುವಾರ ಬೆಳಗಿನ ಜಾವ 1.30 ರ ಸುಮಾರಿಗೆ ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸ ಅಧೀಕ್ಷಕರಾದ  ಮಿಥುನ್ ಹೆಚ್.ಎನ್  ಐ. ಪಿ.ಎಸ್., ಭಟ್ಕಳ ಸಿ.ಎಸ್‌.ಪಿ.ಯ ಪೊಲೀಸ ನಿರೀಕ್ಷಕರಾದ ಕುಸುಮಾಧರ ಕೆ. ಹಾಗೂ ಸಿಬ್ಬಂದಿ, KND,  ಮತ್ತು ತಾಂತ್ರಿಕ ಸಿಬ್ಬಂದಿಯವರೊಂದಿಗೆ ಭಾಗಿಯಾಗಿದ್ದರು.

ಮುಂಬೈ ದಾಳಿಯ ಬಳಿಕ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ‘ರೆಡ್‌ ಫೋರ್ಸ್‌ ಹಾಗೂ ಬ್ಲೂ ಫೋರ್ಸ್‌’ ಎಂದು ಎರಡು ಗುಂಪುಗಳನ್ನು ಮಾಡಲಾಗಿದ್ದು, ‘ರೆಡ್‌ ಫೋರ್ಸ್‌’ನ ನೌಕಾನೆಲೆ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್‌ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಲಿದ್ದಾರೆ. ‘ಬ್ಲೂ ಪೋರ್ಸ್‌’ನ ಪೊಲೀಸ್‌ ಸಿಬ್ಬಂದಿ ಅದನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ


Share: