ಭಟ್ಕಳ: ತಾಲೂಕಿನಲ್ಲಿ ಸತತ 11 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ನಾಮಧಾರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ರಾಮಚಂದ್ರ ನಾಯ್ಕ ಯಲ್ಲಾಪುರ ಹೇಳಿದರು.
ಅವರು ರವಿವಾರದಂದು ಶಿರಾಲಿ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ತಾನದ ಸಭಾಂಗಣದಲ್ಲಿ ಶ್ರೀ ವೆಂಕಟೇಶ್ವರ ವದ್ಯಾವರ್ಧಕ ಸಂಸ್ಥೆಯ ವತಿಯಿಂದ ಬಡ ವಿಧ್ಯಾರ್ತಿಗಳಿಗೆ ಹಮ್ಮಿಕೊಂಡ 11 ನೇ ವರ್ಷದ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದ ಸಂಸ್ಥೆಗಳಿಂದ ಪಡೆದ ಸಹಾಯವನ್ನು ತಾವು ಮುಂದೆ ಅದನ್ನು ಸಮಾಜಕ್ಕೆ ಹಿಂತಿರಿಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯೆಯು ಯಾರ ಸೊತ್ತಲ್ಲ, ಅದನ್ನು ಕಷ್ಟಪಟ್ಟು ಪಡೆದರೆ ಅದನ್ನು ಯಾರಿಂದಲೂ ಕಸಿಯಲು ಸಾದ್ಯವಿಲ್ಲ, ತಾವು ಪಡೆದ ವಿದ್ಯೆಯನ್ನು ಉತ್ತಮ ಕಾರ್ಯಕ್ಕೆ ಬಳಸಿ, ಮನೆಗೆ ಉತ್ತಮ ಮಗನಾಗಿ ಊರಿಗೆ ಉಪಕಾರಿಯಾಗುವ ಗುಣ ನಾವು ರೂಡಿಸಿಕೊಳ್ಳಬೇಕಾಗಿದೆ. ವ್ಯಸನ ಮುಕ್ತ ಸಮಾಜದ ನಮ್ಮದಾಗಬೇಕು. ವಿದ್ಯಾರ್ಥಿಗಳು ಉತ್ತಮ ವಿದ್ಯೆಯನ್ನು ಪಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಂಕಲ್ಪ ಮಾಡಬೇಕು. ಎಂದ ಅವರು ನಮಗೆ ಸಹಾಯ ಮಾಡಿದವರನ್ನು ನೆನೆಯುವ ಕಾರ್ಯ ಯಾವತ್ತೂ ಮಾಡಿದರೆ ಸಮಾಜ ಅಂತವರನ್ನು ನೆನೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಳೆಕೋಟೆ ಹನುಮಂತದ ದೇವಸ್ತಾನದ ಅಧ್ಯಕ್ಷ ಆರ್. ಕೆ. ನಾಯ್ಕ ಮಾತನಾಡಿ ಈ ಪವಿತ್ರ ಕ್ಷೇತ್ರದಲ್ಲಿ ವಿದ್ಯಾರ್ಜನೆ ಮಾಡುವ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ. ಸಮಾಜದ ವಿದ್ಯಾರ್ತಿಗಳು ಕಷ್ಟಪಟ್ಟು ಓದಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದ ಅವರು ಉನ್ನತ ಹುದ್ದೆ ಪಡೆದ ನಾವು ನಮ್ಮ ಪಾಲಕರನ್ನು ಮರೆಯಬಾರದು. ಸಮಾಜದ ಪ್ರತ್ರಿಯೊಬ್ಬನು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಂಡು ಸಮಾಜದ ಅಬಿವೃದ್ದಿಯನ್ನು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿದ್ದ ಜಿಲ್ಲಾ ವಿಶ್ರಾಂತ ನ್ಯಾಯಾಧೀಶರಾದ ರವಿ ಎಂ. ನಾಯ್ಕ ಮಾತನಾಡಿ, ಸಮಾಜದ ಕಾರ್ಯಕ್ರಮ ಮಾಡಬೇಕಾದರೆ ಅದರ ಹಿಂದೆ ಬಹಳಷ್ಟು ಶ್ರಮ ಇರುತ್ತದೆ. ಈ ಶ್ರಮಕ್ಕೆ ಪ್ರತಿಫಲವಾಗಿ ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನ ಹೊಂದಿ ಸಮಾಜಕ್ಕೆ ಹೆಸರು ತರುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊಟೇಲ್ ಉದ್ಯಮಿ ಮಂಜುನಾತ ನಾಯ್ಕ, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಯ್ಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ 9 ನೇ ರ್ಯಾಂಕ ಪಡೆದ ವಿದ್ಯಾರ್ಥಿ ಶ್ರೇಯಸ್ ರವಿ ನಾಯ್ಕ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ.ಆರ್. ನಾಯ್ಕ, ಶಿಕ್ಷಣ ಪ್ರೇಮಿಗಳ ಸಂಘದ ರಾಘವೇಂದ್ರ ನಾಯ್ಕ, ರನ್ನು ಗೌರವಿಸಿ ಸನ್ಮಾನಿಸಲಾಯಿತು.
300 ಕ್ಕೂ ಅಧಿಕ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಮಂಜುನಾತ ನಾಯ್ಕ ಪ್ರಾರ್ಥನೆ ಹಾಡಿದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಜಗದೀಶ ನಾಯ್ಕ ಸ್ವಾಗತಿಸಿ ವರದಿ ವಾಚನ ಮಾಡಿದರು.
ಶಿಕ್ಷಕರಾದ ಗಂಗಾಧರ ನಾಯ್ಕ, ನಾರಾಯಣ ನಾಯ್ಕ ಹಗೂ ಪರಮೇಶ್ವರ ನಾಯ್ಕ, ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರ ನಾಯ್ಕ ವಂದನಾರ್ಪಣೆ ಮಾಡಿದರು.