ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ವಿಜೃಂಭಣೆಯಿಂದ ನಡೆದ ಅಕ್ಷರಾಭ್ಯಾಸ

ಭಟ್ಕಳ: ವಿಜೃಂಭಣೆಯಿಂದ ನಡೆದ ಅಕ್ಷರಾಭ್ಯಾಸ

Sat, 13 Jul 2024 07:49:47  Office Staff   Press Release

ಭಟ್ಕಳ: ಇಲ್ಲಿನ ಪ್ರತಿಷ್ಠಿತ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾದ ಮಕ್ಕಳಿಗೆ ಪ್ರಾರಂಭಿಕ ವಿದ್ಯಾಭ್ಯಾಸದ ಮೊದಲ ಹಂತವಾದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವಿದ್ಯಾ ದೇವತೆಯಾದ ಸರಸ್ವತಿಯ ಉಪಾಸನೆಯೊಂದಿಗೆ ವೆ.ಮೂ ಪ್ರಮೋದ ಭಟ್ ಇವರ ಸಾರಥ್ಯದಲ್ಲಿ ಸುಮಾರು 60 ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಬಂದು ಈ ಮಹೋನ್ನತ ಕಾರ್ಯದಲ್ಲಿ ಭಾಗಿಯಾದರು.

ಭಟ್ಕಳ ಎಜ್ಯುಕೇಶನ ಟ್ರಸ್ಟ ನ ಅಧ್ಯಕ್ಷರಾದ ಸುರೇಶ ನಾಯಕ, ಟ್ರಸ್ಟಿಗಳಾದ ಡಾ. ರಾಜೇಶ ನಾಯಕ, ನಾಗೇಶ ಭಟ್, ರಮೇಶ ಖಾರ್ವಿ,  ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Share: