ದುಬೈ, ಅಕ್ಟೋಬರ್ 12: ಬರುವ ಶುಕ್ರವಾರ, ಅಕ್ಟೋಬರ್ 16 ರಂದು ನಗರದ ಬಿಎಂಜೆಡಿ ಸಂಘಟನೆ ಈದ್ ಮಿಲನ್ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿಶೇಷ ಅತಿಥಿಗಳಾಗಿ ಖ್ಯಾತ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ರವರು ಆಗಮಿಸಲಿದ್ದಾರೆ.
ಯುವಜನತೆಯ ಅಚ್ಚುಮೆಚ್ಚಿನ ಆಟಗಾರನಾಗಿರುವ ಯೂಸುಫ್ ಪಠಾಣ್ ರನ್ನು ಭೇಟಿಯಾಗುವ ಇದೊಂದು ಅಪೂರ್ವ ಅವಕಾಶವಾಗಿದ್ದು ಕ್ರಿಕೆಟ್ ಬಗ್ಗೆ ಹಲವು ಮಾಹಿತಿಗಳನ್ನು ಪಡೆಯಲು ಹಾಗೂ ಯುವಪೀಳಿಗೆಗೆ ಸ್ಪೂರ್ತಿ ತುಂಬಲು ಇದೊಂದು ಅತ್ಯುತ್ತಮ ಸಂದರ್ಭವಾಗಿದೆ ಎಂದು ಬಿ.ಎಂ.ಜೆ.ಡಿ ಸಂಘಟನೆಯ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ಖಲೀಫಾರವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸಲು ಕಾರ್ಯಕಾರಿ ಸಮಿತಿ ಅವಿರತವಾಗಿ ಶ್ರಮಿಸುತ್ತಿದ್ದು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಜಾಜ್ ಪಲ್ಸರ್ ಬೈಕ್, ಲ್ಯಾಪ್ ಟಾಪ್, ಮೊಬೈಲ್ ಫೋನ್, ಚಿನ್ನಾಭರಣ ಸಹಿತ ಹಲವು ಬಹುಮಾನಗಳನ್ನು ಪ್ರಕಟಿಸಲಾಗಿದೆ. ಮಕ್ಕಳಿಗೆ ಆಟವಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು ತಾಯಂದಿರು ನಿರಾಳವಾಗಿ ಕಾರ್ಯಕ್ರಮದ ಸೊಬಗನ್ನು ವೀಕ್ಷಿಸಲು ಅನುವುಮಾಡಿಕೊಡಲಾಗಿದೆ.
ಸಭಾಂಗಣದಲ್ಲಿ ಕೇವಲ ಎರೆಡು ಸಾವಿರ ಆಸನಗಳ ವ್ಯವಸ್ಥೆಯಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಈದ್ ಕಮಿಟಿ ಪ್ರತಿನಿಧಿಯಾದ ಫಜಲ್ ಜುಕಾಕೋರವರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸಬಹುದಾಗಿದೆ:
Abdul Rahman Siddiqui
GS – BMJD
050-6514357