ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ರಾಜ್ಯ ಮಟ್ಟದ 'ಮೀಡಿಯಾ ಫೆಸ್ಟ್' ಶ್ರೀ ಗುರು ಸುಧೀಂದ್ರ ವಿದ್ಯಾರ್ಥಿಗಳ ಸಾಧನೆ

ಭಟ್ಕಳ: ರಾಜ್ಯ ಮಟ್ಟದ 'ಮೀಡಿಯಾ ಫೆಸ್ಟ್' ಶ್ರೀ ಗುರು ಸುಧೀಂದ್ರ ವಿದ್ಯಾರ್ಥಿಗಳ ಸಾಧನೆ

Sat, 13 Jul 2024 07:44:14  Office Staff   Press release

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕಾನ್ಫರೆನ್ಸ್ ಹಾಗೂ ರಾಜ್ಯಮಟ್ಟದ ಮೀಡಿಯಾ ಫೆಸ್ಟ್ ನಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಬಿಏ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡವು ಬಾನುಲಿಗ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತದೆ ಮತ್ತು ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಸದ್ರಿ ವಿಭಾಗದ ವಿದ್ಯಾರ್ಥಿನಿಯರಾದ ಮೇಘ ಮತ್ತು ಲಿಡಿಯ ಅವರು ನಕಲಿ ಸುದ್ಧಿ ಮತ್ತು ಅದರ ಪ್ರಭಾವದ ಕುರಿತು ಸಂಶೋಧನಾ ಲೇಖನವನ್ನು ಮಂಡಿಸಿರುತ್ತಾರೆ.

ಭಟ್ಕಳ ತಾಲೂಕಿನ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಪರಿಣಿತರು ವಿದ್ಯಾರ್ಥಿಗಳಿಗೆ ಈ ರಾಜ್ಯಮಟ್ಟದ ಸ್ಪರ್ಧೆಗೆ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು. 

ವಿದ್ಯಾರ್ಥಿಗಳ ಈ ಸಾಧನೆಗೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜೆ. ಎಮ್ ಚಂದುನವರ್, ಸಹ ಪ್ರಾಧ್ಯಾಪಕ ಡಾ. ಸಂಜಯ್ ಕುಮಾರ್ ಎಮ್ ಮಾಲಗತ್ತಿ, ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.


Share: