ಮೇ 22, 23: ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ
ಮಂಗಳೂರು, ಮೇ.3: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಮೇ 22, 23ರಂದು ಉಳ್ಳಾಲದಲ್ಲಿ ರಾಜ್ಯ ಮಟ್ಟದ ವೀರ ರಾಣಿ ಅಬ್ಬಕ್ಕ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಮೇ 16ರಂದು ತೊಕ್ಕೊಟ್ಟು ಒಳಪೇಟೆಯಲ್ಲಿರುವ ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಪ್ರೌಢಶಾಲೆಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇವುಗಳಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ತ್ರೋಬಾಲ್, ತೆಂಗಿನಕಾಯಿಯ ಸಿಪ್ಪೆ ಸುಲಿಯು ವುದು, ಸೋಗೆ ಹೆಣೆಯುವುದು, ಅಕ್ಕಿಮುಡಿ ಕಟ್ಟು ಸ್ಪರ್ಧೆ, ಭಾಷಣ, ಗಾಯನ, ಪ್ರಹಸನ, ರಸಪ್ರಶ್ನೆ, ಜಾನಪದ ನತ್ಯ, ತುಳು ಪಾಡ್ದನ ಇತ್ಯಾದಿ ಈ ಸ್ಪರ್ಧೆಯಲ್ಲಿ ಸೇರಿದೆ.
ಆಸಕ್ತರು ‘ಕಾರ್ಯಾಧ್ಯಕ್ಷರು, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಪ್ಪಯ್ಯ ಮೆನ್ಶನ್ ತೊಕ್ಕೊಟ್ಟು ಒಳಪೇಟೆ ಪೆರ್ಮನ್ನೂರು ಅಂಚೆ, ಮಂಗಳೂರು -17 ಇಲ್ಲಿಗೆ ಮೇ 12ರೊಳಗೆ ತಮ್ಮ ವಿವರ, ವಿಳಾಸವನ್ನು ಬರೆದು ಕಳುಹಿಸ ಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2456957, 9448251523, 9845226059 ಸಂಪರ್ಕಿಸಬಹುದು ಎಂದು ಉಳ್ಳಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ಜಯರಾಮ ಶೆಟ್ಟಿ, ಪದಾಧಿಕಾರಿಗಳಾದ ಕೆ. ತಾರಾನಾಥ ರೈ, ಪಿ.ಡಿ.ಶೆಟ್ಟಿ, ಸದಾನಂದ ಬಂಗೇರ, ಆನಂದ ಕೆ. ಅಸೈಗೋಳಿ ಉಪಸ್ಥಿತರಿದ್ದರು.