ಭಟ್ಕಳ:೧೩, ಭಟ್ಕಳದಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿರುವ ಹಿನ್ನೆಲೆ ಬೇಸತ್ತ ಭಟ್ಕಳದ ಜನತೆ ಪ್ರತಿಭಟನೆಗೆ ಮುಂದಾಗಲು ಸಜ್ಜಾಗಿದ್ದು ಈ ಕುರಿತು ಇಂದು ಭಟ್ಕಳ ಮಜ್ಲಿಸೆ ಇಸ್ಲಾಹ ತಂಝೀಮ್ ನ ನಿಯೋಗವು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೆಸ್ಕಾಂ ನ ಭಟ್ಕಳ ಸಹಾಯಕ ಅಭಿಯಂತರ ಎ.ಎಮ್. ಪಠಾಣ್ ರನ್ನು ಭೇಟಿಯಾಗಿ ಭಟ್ಕಳದಲ್ಲಿ ದಿನಕ್ಕೆ ಹತ್ತು ಇಪ್ಪತು ಬಾರಿ ವಿದ್ಯುತ್ ಕಡಿತಗೊಳಿಸುತ್ತಿರುವ ಹಿನ್ನೆಲಯಾದರೂ ಏನು ಎನ್ನುವುದರ ಕುರಿತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಕನ್ನಡ ಜಿಲ್ಲೆಯ ಬೆರೆ ತಾಲೂಕಿನಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಸಿರ್ಸಿ ಮತ್ತಿತರ ತಾಲೂಕಿನಲ್ಲಿ ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಆದರೆ ಇಲ್ಲಿಮಾತ್ರ ಬೇಕಾಬಿಟ್ಟಿ ಹೊತ್ತುಗೊತ್ತು ಇಲ್ಲದೆ ದಿನಕ್ಕೆ ಹತ್ತಿಪ್ಪತ್ತು ಬಾರಿ ವಿದ್ಯುತ್ ಕಡಿತಗೊಳಿಸಿ ಜನರ ಜೀವನ ಹಾಗೂ ನೆಮ್ಮದಿಯನ್ನು ಹಾಳು ಮಾಡಲಾಗುತ್ತಿದೆ. ಪರಿಸ್ಥಿತಿ ಹಿಗೆಯೆ ಮುಂದುವರಿದರೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದ್ದು ಇದನ್ನು ಪರಿಗಣಿಸಿದ ಹೆಸ್ಕಾಂ ಅಧಿಕಾರಿ ಪಠಾನ್ ಕೂಡಲೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ದಿನಕ್ಕೆ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ಕಡಿತಗೊಳಿಸುವುದರ ಕುರಿತು ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದ್ದು ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ಭಟ್ಕಳದಲ್ಲಿ ವಿದ್ಯುತ್ ಕಡಿತಗೊಳಿಸುತ್ತಾರೆ ಅಧಿಕಾರಿ ತಾನು ಕೊಟ್ಟ ಮಾತಿನಂತೆ ನಡೆದುಕೊಳ್ಳತ್ತಾರೂ ಇಲ್ಲವೊ ಎಂಬುದನ್ನು ಜನ ಕಾದು ನೋಡುವಂತಾಗಿದೆ. ತಂಝೀಮ್ ನಿಯೋಗದಲ್ಲಿ ಅಧ್ಯಕ್ಷ ಡಾ. ಬದ್ರುಲ್ ಹಸನ್ ಮುಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಖಾಲಿದ್, ಅಬ್ದುಲ್ ರಖೀಬ್ ಎಮ್.ಜೆ. ಭಟ್ಕಲ ತಾಲೂಕ ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರಾಮ ಮೋಗೆರ್ ಮತ್ತಿತರರು ಉಪಸ್ಥಿತರಿದ್ದರು. (ಫೋಟೊ: ೧೩-ಬಿಕೆಎಲ್-೦೨- ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಭಟ್ಕಳ ತಾಲೂಕಾ ಅಧಿಕಾರಿಯೊಂದಿಗೆ ಮಾತನಾಡುತ್ತಿರುವ ತಂಝೀಮ್ ನಿಯೋಗದ ಸದಸ್ಯರು