ಭಟ್ಕಳ: ಮೀನುಗಾರಿಕೆಗೆ ತೆರಳಿದಾಗ, ಬಲೆ ಬೀಸುವ ಸಂದರ್ಭದಲ್ಲಿ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು ಮೀನುಗಾರ ಮೃತರಾದ ಘಟನೆ ಬುಧವಾರ ನಡೆದಿದೆ.
ಸೊಡಿಗದ್ದೆಯ ಕೆಳಗಿನ ಮನೆಯ ಮಂಜುನಾಥ ವೆಂಕಟ ಮೊಗೇರ್ (60) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ.
ದೋಣಿಯಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ, ಬಲೆ ಬೀಸಿದಾಗ ಹಗ್ಗ ಕುತ್ತಿಗೆಗೆ ಸಿಕ್ಕಿಕೊಂಡು ಮಂಜುನಾಥ ವೆಂಕಟ ಮೊಗೇರ್ ಮೃತರಾದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.