ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮಗುವಿನೊಂದಿಗೆ ತಾಯಿ ನಾಪತ್ತೆ

ಭಟ್ಕಳ: ಮಗುವಿನೊಂದಿಗೆ ತಾಯಿ ನಾಪತ್ತೆ

Sat, 03 Feb 2024 19:11:51  Office Staff   S O News

ಕಾರವಾರ: ಮಿಶ್ರಿಯಾ (25ವರ್ಷ), ಕೋಳಿ ಫಾರ್ಮ ಬದ್ರಿಯಾ ಕಾಲೋನಿ, ತಾ: ಭಟ್ಕಳ ಇವರು ಜ. 30 ರಂದು ಬೆಳಿಗ್ಗೆ 11 ಗಂಟೆಗೆತನ್ನ ಮಗಳು ಆಯಿಶಾ ಮೀನಾ (2ವರ್ಷ) ಅವಳೊಂದಿಗೆ ತಾಯಿ ಮನೆಗೆ ಹೋಗುತ್ತೇನೆ ಎಂದು ಪಕ್ಕದ ಮನೆಯವರಿಗೆ ಹೇಳಿ ಹೋಗಿದ್ದು, ತನ್ನತಾಯಿ ಮನೆಗೂ ಹೋಗದೇ ಸಂಬAಧಿಕರ ಮನೆಗೂ ಹೋಗದೇಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾರೆ.

ಕಾಣೆಯಾದ ಮಹಿಳೆಯ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು, 5.0 ಅಡಿ ಎತ್ತರ, ಬಲಗಣ್ಣಿನ ಹತ್ತಿರಕಪ್ಪು ಎಳ್ಳಿನ ಗುರುತುಇರುತ್ತದೆ. ಬ್ಯಾರಿ, ಕನ್ನಡ, ಭಾಷೆ ಮಾತನಾಡುತ್ತಾಳೆ. ಚೂಡೀದಾರ ಹಾಗೂ ಕಪ್ಪು ಬುರ್ಖಾ ಧರಿಸಿದ್ದಾಳೆ.

ಕಾಣೆಯಾದ ಮಗುವಿನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು 3.0 ಅಡಿ ಎತ್ತರ ಬ್ಯಾರಿ, ಭಾಷೆ ಮಾತನಾಡುತ್ತಾಳೆ.ಗವನ್ ಧರಿಸಿದ್ದಾಳೆ.

ಇವರು ಸಾರ್ವಜನಿಕರಿಗೆಕಂಡು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್‌ಠಾಣೆದೂರವಾಣಿ ಸಂಖ್ಯೆ 08385-227333, ಮೊಬೈಲ್ ನಂ. 9480805252 ಕಾರವಾರ ಪೊಲೀಸ ಕಂಟ್ರೋಲ್‌ರೂ. 08382-226550/112/100 ಗೆ ಸಂಪರ್ಕಿಸುವAತೆ ಭಟ್ಕಳ ಗ್ರಾಮೀಣ ಪೊಲೀಸ್‌ಠಾಣೆ ಪೊಲೀಸ್‌ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: