ಭಟ್ಕಳ: ಮಾರ್ಚ್ 1: ಇಲ್ಲಿನ ಸಾಲಗದ್ದೆ ಸ್ಪೋಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ ಅಂತರ್ ಜಿಲ್ಲಾ ಆಹ್ವಾನಿತರ ಬ್ಯಾಡ್ಮಿಂಟನ್ ಟೂರ್ನಮೆಂಟ್ ಡಾ. ಚಿತ್ತರಂಜನ್ ಕಪ್-೨೦೧೦ನ್ನು ಗಿಡಕ್ಕೆ ನೀರು ಸಿಂಪಡಿಸುವುದರ ಮೂಲಕ ವಿಶಿಷ್ಠ ರೀತಿಯಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟಕರಾಗಿ ಆಗಮಿಸಿದ ಭಟ್ಕಳ ತಾಲೂಕಾ ಉಪವಿಭಾಗಾಧಿಕಾರಿ ಡಾ. ಕೆ.ವಿ.ತ್ರಿಲೋಕಚಂದ್ರ ಮಾತನಾಡಿ ಕ್ರೀಡೆಯಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯ. ಕ್ರೀಡೆ ಮನಷ್ಯನನ್ನು ಕ್ರೀಯಾಶೀಲನನ್ನಾಗಿಸಲು ಸಹಾಯ ಮಾಡುತ್ತದೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯೂ ಸಾಧ್ಯ ಎಂದ ಅವರು ಭಟ್ಕಳದಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದರೆ ಸೌಹಾರ್ದತೆ ಮೂಡಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷ ಮುಹಮ್ಮದ್ ಝೀಶಾನ್ ಅಹಮದ್, ಡಾ.ರಾಜೇಶ ಯು. ಚಿತ್ತರಂಜನ್, ಭಟ್ಕಳ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ರಾಜೇಶ ನಾಯಕ,ನಗರ ಠಾಣೆಯ ಎಸೈಗಳಾದ ಮಂಜುನಾಥ ಗೌಡ, ಉಮೇಶ ಕಾಂಬಳೆ, ನರೇಂದ್ರ ನಾಯಕ, ಸಾಲಗದ್ದೆ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಶಾಂತಾರಾಮ ಭಟ್ಕಳ ಉಪಸ್ಥಿತರಿದ್ದರು. ಸ್ಪೋಟ್ಸ್ ಕ್ಲಬ್ ಸದಸ್ಯ ಶ್ರೀನಾಥ ಫೈ ಸ್ವಾಗತಿಸಿದರು. ಕಿರಣ ಶಾನಭಾಗ್ ಕಾರ್ಯಕ್ರಮ ನಿರ್ವಹಿಸಿದರು.