ಭಟ್ಕಳ, ಜನವರಿ 5: ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ಭಟ್ಕಳ ಸರಕಾರಿ ಕಾಲೇಜ್ ನೂತನ ಕಟ್ಟಡ ನಿರ್ಮಾಣಕ್ಕೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಸ್ಥಳ ನಿಗದಿಯ ಗೊಂದಲ ಮತ್ತೊಮ್ಮೆ ತಾಲೂಕು ಪಂಚಾಯತ ಕೆಡಿಪಿ ಸಭೆಯಲ್ಲಿಯೂ ಪ್ರತಿಧ್ವನಿಸಿದ್ದು, ಮುಂದಿನ ಮೂರು ತಿಂಗಳ ಒಳಗೆ ಇದು ಇತ್ಯರ್ಥವಾಗದೇ ಹೋದಲ್ಲಿ ಸರಕಾರ ಬಿಡುಗಡೆ ಮಾಡಿರುವ ಅನುದಾನ ಹಿಂದಕ್ಕೆ ಹೋಗುವ ಆತಂಕವನ್ನು ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಎಸ್.ಭಟ್ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಇಂದೇ ಸರ್ವೇ ಕಾರ್ಯವನ್ನು ನಡೆಸಲಾಗುತ್ತಿದೆ. ವರದಿಯನ್ನು ಕೂಡಲೇ ಹಿರಿಯ ಅಧಿಕಾರಿಗಳಿಗೆ ರವಾನಿಸಿ ದೀರ್ಘ ಕಾಲದ ಸಮಸ್ಯೆಗೆ ಇತಿಶ್ರಿ ಹಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ವರದಿ: ವಸಂತ ದೇವಾಡಿಗ, ಭಟ್ಕಳ