ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಬಿಇಡಿ ಪರೀಕ್ಷೆಯಲ್ಲಿ ಅಂಜುಮನ್ ಉತ್ತಮ ಫಲಿತಾಂಶ

ಭಟ್ಕಳ: ಬಿಇಡಿ ಪರೀಕ್ಷೆಯಲ್ಲಿ ಅಂಜುಮನ್ ಉತ್ತಮ ಫಲಿತಾಂಶ

Thu, 15 Aug 2024 07:47:48  Office Staff   S O News

ಭಟ್ಕಳ: ಬಿಇಡಿ ಕಾಲೇಜಿನ 3ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಭಟ್ಕಳ ಅಂಜುಮನ್ ಬಿಇಡಿ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ ಗಜಾನನ ನಾಯ್ಕ 93.50% ಅಂಕ ಪಡೆದು ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ವಿದ್ಯಾರ್ಥಿನಿ ನಾಫಿಯಾ ಶೇ.92.83% ಅಂಕ ಪಡೆದು ಕಾಲೇಜಿಗೆ ದ್ವಿತೀಯ, ಸಾದಿಕಾ ಬಾನು 92.50% ಅಂಕಗಳೊಂದಿಗೆ ತೃತೀಯ, ಶಹನಾಜ್ ಬಾನು 92.3% ಅಂಕಗಳೊಂದಿಗೆ 4ನೇ ಹಾಗೂ ಸ್ವಾತಿ ನಾಯ್ಕ 92% ಅಂಕ ಪಡೆದು 5ನೇ ಸ್ಥಾನ ಪಡೆದಿದ್ದಾರೆ.

ಪರೀಕ್ಷೆ ಬರೆದ ಎಲ್ಲ 46 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಈ ಎಲ್ಲ ವಿದ್ಯಾರ್ಥಿಗಳನ್ನು ಭಟ್ಕಳ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯೂನುಸ್ ಖಾಜಿಯಾ, ಪ್ರಧಾನ ಕಾರ್ಯದರ್ಶಿ ಮಹ್ಮದ್ ಇಸಾಕ್ ಶಾಬಂದ್ರಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ. 


Share: