ಹೊನ್ನಾವರ, ಅಕ್ಟೋಬರ್ 20: ತಾಲ್ಲೂಕಿನ ಕರ್ಕಿ ತೂಗುಸೇತುವೆ ಬಳಿ ಕಾನೂನು ಬಾಹಿರವಾಗಿ ಜೂಜಾಡುತ್ತಿದ್ದ ಗುಂಪಿನ ಮೇಲೆ ಧಾಳಿ ನಡೆಸಿ ನಾಲ್ವರನ್ನು ಬಂಧಿಸಿ 615 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರಾದ ನಾರಾಯಣ ಪಿ.ಶೇಠ್, ಮಂಜುನಾಥ ನಾಯ್ಕ್, ಮಾಧವ ನಾಯ್ಕ್ ಶೇಡಿಕುಳಿ ಮತ್ತು ಸುರೇಶ ನಾಯ್ಕ ತಾರಿಬಾಗಿಲು ಬಂಧಿತ ಆರೋಪಿಗಳಾಗಿದ್ದಾರೆ. ಪಿ.ಎಸ್.ಐ. ಗೋವಿಂದಾರಾಜ ದಾಸರಿ ಮತ್ತು ಸಿಬ್ಬಂದಿ ಈ ಧಾಳಿ ನಡೆಸಿದ್ದು ಧಾಳಿಯ ಮುನ್ನ ಖಚಿತ ಮಾಹಿತಿ ದೊರಕಿತ್ತು.