ಭಟ್ಕಳ, ನವೆಂಬರ್ 16: ಉದ್ವಿಗ್ನಕ್ಕೆ ತುತ್ತಾಗಿದ್ದ ಭಟ್ಕಳ ನಿಷೇಧಾಜ್ಞೆ ಹೇರಿದ ೧೨ ಗಂಟೆಯೊಳಗಾಗಿ ಮೊದಲಿನ ಸ್ಥಿತಿಗೆ ಹಿಂದಿರುಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನವನ್ನು ಮುಂದುವರೆಸಿದ್ದು, ರವಿವಾರ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ.
ಈ ನಡುವೆ ಪೊಲೀಸ್ ಪರ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮೇರಾವನ್ನು ಪುಡಿಗಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಯಾವುದೇ ಸಮಯದಲ್ಲಿ ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ಯತ್ನಿಸುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಡಿವಾಯ್ಎಸ್ಪಿ ವೇದಮೂರ್ತಿ, ಪ್ರೋಬೇಷನರಿ ಡಿವಾಯ್ಎಸ್ಪಿ ಕುಮಾರಸ್ವಾಮಿ, ಸಿಪಿಐ ಗುರುಮತ್ತೂರು ರಕ್ಷಣೆಯ ನೇತೃತ್ವವನ್ನು ವಹಿಸಿದ್ದಾರೆ.