ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ರಾ.ಹೆ. 112 ರ ರಸ್ತೆ ದುರಸ್ತಿ ಪ್ರತಿಭಟನೆ

ಸಕಲೇಶಪುರ: ತಾಲ್ಲೂಕು ಯುವ ಕಾಂಗ್ರೆಸ್ ವತಿಯಿಂದ ರಾ.ಹೆ. 112 ರ ರಸ್ತೆ ದುರಸ್ತಿ ಪ್ರತಿಭಟನೆ

Tue, 24 Nov 2009 18:17:00  Office Staff   S.O. News Service
ಸಕಲೇಶಪುರ, ನವೆಂಬರ್ 24:  ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಹಮ್ಮಿ ಕೊಂಡಿರುವ ರಾಜ್ಯ ಹದ್ದಾರಿ 112 ರಸ್ತೆ ದುರಸ್ತಿ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರು ಬಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಧುಸೂದನ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿ, ಜನರ ಸಮಸ್ಯೆಗಳ ಬಳಿ ಪಕ್ಷವು ಹೋಗಿ ಪರಿಹಾರ ನೀಡಲಿದೆ. ಇದಕ್ಕಾಗಿ ಯುವ ಕಾಂಗ್ರೆಸ್ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ, ರಾಜ್ಯ ಸರಕಾರ ಸಮಸ್ಯೆಯಲ್ಲಿ ಸಿಲುಕ್ಕಿದ್ದು ಇವರಿಂದ ಜನರಿಗೆ ಯಾವುದೆ ಉಪಯೊಗವಾಗುವುದಿಲ್ಲ, ಜನರ ಬಳಿ ನಾವು ತೆರೆಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
 
ಸುದ್ದಿಗೋಷ್ಟಿಯಲ್ಲಿ ಚಿಲ್ಲಾ ಯುವ ಕಾರ್ಯದರ್ಶಿ ತಾಲೂಕು ಯುವಾಧ್ಯಕ್ಷ ಸಂಜಯ್, ದೊಡ್ಡೀರಯ್ಯ,ಪ್ರಜ್ವಲ್ ಮುಂತಾದವರು ಇದ್ದರು.

ಸೌಜನ್ಯ: ಸುದ್ದಿಮನೆ

Share: