ಚಿಕ್ಕಮಗಳೂರು ನ.11: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಜುಲೈ ಯಲ್ಲಿ ನಡೆದ ಕೋಮುಗಲಭೆಗೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್‌ರ ಪ್ರಚೋ ದನಕಾರಿ ಭಾಷಣವೇ ಕಾರಣ. ಇದರ ದುರ್ಲಾಭವನ್ನು ಸಂಘ ಪರಿವಾರ ಬಳಸಿ ಕೊಂಡಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಆರೋಪಿಸಿದ್ದಾರೆ.
ಬುಧವಾರ ಚಿಕ್ಕಮಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ಕೋಸೌವೇ ಮತ್ತು ಪಿಯುಸಿಎಲ್ ಜಂಟಿಯಾಗಿ ನಡೆಸಿದ ಮೈಸೂರಿನಲ್ಲಿ ನಡೆದ ಕೋಮುಗಲಭೆಯ ಸತ್ಯ ಶೋಧನಾ ವರದಿಯ ಪುಸ್ತಕ ಬಿಡುಗಡೆ ಗೊಳಿಸಿದ ಬಳಿಕ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.
ಜು.೨ರಂದು ಮೈಸೂರಿನಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು. ಸಾಧಿಯಾ ಟ್ರಸ್ಟ್ ಬಳಿ ಮಸೀದಿ ನಿರ್ಮಾಣ ಸ್ಥಳದಲ್ಲಿ ಹಂದಿಯ ರುಂಡ ತಂದು ಹಾಕಿ ಗಲಭೆಗೆ ಪ್ರಚೋದನೆ ನೀಡ ಲಾಗಿತ್ತು. ಗಲಭೆಯಲ್ಲಿ ಅನೇಕ ಅಮಾಯಕರು ಸಂತ್ರಸ್ತರಾಗಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭ ಸರಕಾರದ ನಿರ್ಲಕ್ಷ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿತ್ತು. ಆದರೆ ಸರಕಾರ ಮಾತ್ರ ಪಿಎಫ್‌ಐ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದೆ ಎಂದು ಅಶೋಕ್ ಹೇಳಿದರು.
ಮೈಸೂರು ಜಿಲ್ಲಾಧಿಕಾರಿ, ಗಲಭೆ ಸಂತ್ರಸ್ತರು, ಕ್ಯಾತಮಾರನಹಳ್ಳಿ ಹಾಗೂ ಉದಯ ಗಿರಿಯ ವಿವಿಧ ಸಮು ದಾಯದ ಮುಖಂಡರು, ಹಲವು ಪ್ರತ್ಯಕ್ಷದರ್ಶಿಗಳು ಹೀಗೆ ಘಟನೆ ಯೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಬಂಧ ಹೊಂದಿರುವ ಹಲವರ ಹೇಳಿಕೆಗಳು ಅಲ್ಲದೆ ಕಳೆದ ೩ ತಿಂಗಳ ಪತ್ರಿಕಾ ವರದಿಗಳು, ಡಿಸಿ ಮತ್ತು ಮೈಸೂರು ಪೊಲೀಸ್ ಕಮಿಶನರ್‌ರ ಹೇಳಿಕೆ, ಎಫ್‌ಐಆರ್‌ಗಳ ಆಧಾರ ದಲ್ಲಿ ಈ ವರದಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಸಹ ಕಾರ್ಯದರ್ಶಿ ಗೌಸ್ ಮುಹಿಯುದ್ದೀನ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಯೂಸುಫ್ ಹಾಜಿ, ಪಿಎಫ್‌ಐ ಮುಖಂಡ ಕೆ.ಎಚ್. ಮುಸ್ಲಿಯಾರ್, ಮುಸ್ಲಿಂ ಮೈನಾರಿಟಿ ಕಮಿಟಿಯ ಜಂಶೀದ್ ಉಪಸ್ಥಿತರಿದ್ದರು