ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಗೋವುಗಳ ಅಪಹರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಲಿ ಗ್ರಾಮಸ್ಥರು ಆಗ್ರಹ

ಭಟ್ಕಳ: ಗೋವುಗಳ ಅಪಹರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಲಿ ಗ್ರಾಮಸ್ಥರು ಆಗ್ರಹ

Sat, 19 Oct 2024 06:43:21  Office Staff   S O News

ಭಟ್ಕಳ: ದಿನೇ ದಿನೇ ಹೆಚ್ಚಾಗುತ್ತಿರುವ ಗೋವುಗಳ ಅಪಹರಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾಲಿಯ ಸಾರ್ವಜನಿಕರು ಭಟ್ಕಳ ನಗರ ಠಾಣೆಗೆ ತೆರಳಿ ನಗರ ಠಾಣೆಯ ವೃತ್ತ ನಿರೀಕ್ಷ ಗೋಪಿಕೃಷ್ಣ ಅವರ ಮೂಲಕ ಡಿವೈಎಸ್ಪಿ ಗೆ ಮನವಿ ಸಲ್ಲಿಸಿದ್ದಾರೆ.

ಜಾಲಿ ಭಾಗದಲ್ಲಿ ಅತೀ ಹೆಚ್ಚಿನ ಜನರು ಗೋವುಗಳ ಮೇಲೆ ಅವಲಂಬಿತರಾಗಿದ್ದು, ಅಂತಹ ಗೋವುಗಳನ್ನು ದುಷ್ಕರ್ಮಿಗಳು ಅಮಲು ಬರುವ ಪದಾರ್ಥಗಳನ್ನು ಉಪಯೋಗಿಸಿ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ. ದಿನೇ ದಿನೇ ಈ ಪ್ರಕರಣ ಹೆಚ್ಚುತ್ತಿದ್ದು, ಇದಕ್ಕೆ ತಾವು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಈ ಮೊದಲೇ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದು ಇರುತ್ತದೆ. ಆ ಪ್ರಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ.

ದಿನೇ ದಿನೇ ದುಷ್ಕರ್ಮಿಗಳು ಗೋವುಗಳನ್ನು ಕದ್ದೊಯ್ಯುವ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ದುಷ್ಕರ್ಮಿಗಳಿಗೆ ಕಾನೂನಿನ ಕ್ರಮ ಇರುವುದಿಲ್ಲ ಎಂದಾದರೆ ನಾವೇ ಸರಿಯಾದ ರೀತಿಯಲ್ಲಿ ಕ್ರಮ ಜರುಗಿಸುವೆವು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಅಲ್ಲದೇ ಅದರಿಂದಾಗುವ ಅನಾಹುತಕ್ಕೆ ನೇರವಾಗಿ ಪೊಲೀಸ್ ಇಲಾಖೆ ಹೊಣೆಯಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಪೂರ್ವದಲ್ಲಿ ಭಟ್ಕಳ ಗ್ರಾಮೀಣ ಠಾಣೆಗೂ ತೆರಳಿ ತಮ್ಮ ಊರಿನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು. 

ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ ಸದಸ್ಯ ದಯಾನಂದ ನಾಯ್ಕ,ವಸಂತ ನಾಯ್ಕ, ಸಂಕೇತ ಆಚಾರಿ, ಉಮೇಶ ನಾಯ್ಕ,ಮಹೇಶ ಮೊಗೇರ, ನಾಗೇಶ ನಾಯ್ಕ ಹೆಬಳೆ,ರಾಘವೇಂದ್ರ ನಾಯ್ಕ,ಮೂಡಭಟ್ಕಳ, ಕುಮಾರ ನಾಯ್ಕ,ಹನುಮಾನ್ ನಗರ ಸೇರಿದಂತೆ, ಜಾಲಿ ನಾಗರಿಕರು ಉಪಸ್ಥಿತರಿದ್ದರು


Share: