ಭಟ್ಕಳ: ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲವತಿಯಿಂದ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮುಟ್ಟಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳ್ಳಿಗ್ಗೆ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ ಭಾರತ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಗಮನವಹಿಸಿ. ಇಡೀ ದೇಶದ ಎಲ್ಲಾ ಭಾಗಗಳಲ್ಲಿ ಸ್ವಚ್ ಭಾರತ್ ಕಾರ್ಯಕ್ರಮದ ಬಗ್ಗೆ ಅರಿವು ಮುಡಿಸುವ ಕೆಲಸ ಮಾಡಿದ್ದಾರೆ. ಸದ್ಯ ನಾವೆಲ್ಲ ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೋ. ಅದೇ ರೀತಿ ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಕೂಡ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಸರ್ಕಾರಿ ಶಾಲೆ ಕಾಲೇಜು ಹಾಗೂ ಇನ್ನಿತರ ಸಾರ್ವಜನಿಕ ಪ್ರದೇಶಗಳನ್ನು ಕೂಡ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ವೇದಿಕೆ ಕಾರ್ಯಕ್ರಮದಲ್ಲಿ ಕಸ ನೋಡಿದರೆ ಅದನ್ನು ಅವರ ಜೋಬಿನಲ್ಲಿ ಹಾಕಿಕೊಳ್ಳುವಂತ ಕೆಲಸ ಮಾಡುತ್ತಾರೆ. ಹಾಗೆಯೇ ನಮ್ಮ ಕಾರ್ಯಕರ್ತರು ಕೂಡ ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದ ಅವರು ಇಂದು ನಮ್ಮ ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲವತಿಯಿಂದ ಬಹಳ ಹಳೆಯ ಶಾಲೆಯಾದ ಮುಟ್ಟಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ವಚ್ಛತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಾವು ತಿಂಗಳು ಪೂರ್ತಿ ತಾಲೂಕಿನ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ನಂತರ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ ಮಾತನಾಡಿ ಕಳೆದ ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿಂದ ಮಹಾತ್ಮ ಗಾಂಧೀಜಿ ಅವರ ಜಯಂತಿ ತನಕ ನಮ್ಮ ಪಕ್ಷದಿಂದ 15 ದಿನಗಳ ಸೇವಾಪಾಕ್ಷಿಕ ಕಾರ್ಯಕ್ರಮವನ್ನು ಎಲ್ಲಾ ಮೋರ್ಚಾಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವು. ಅದರಂತೆ ಇಂದು ಕೊನೆಯ ದಿನದಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದೇವೆ ಎಂದ ಅವರು ನಾವೆಲ್ಲ ಸ್ವಚ್ಛತಾ ಕಾರ್ಯಕ್ರಮ ಇವತ್ತು ಒಂದೇ ದಿನಕ್ಕೆ ಮಾತ್ರ ಸೀಮಿತವಾಗಿಡದೆ. ಪ್ರತಿ ನಿತ್ಯವೂ ನಮ್ಮ ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳ ಬೇಕು ಎಂದರು.
ನಂತರ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ ಮಾತನಾಡಿ ಬಿಜೆಪಿ ಪಕ್ಷ ವಿಭಿನ್ನವಾಗಿದ್ದು ನಾವು ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ.ಚುನಾವಣೆತರ ದಿನಗಳಲ್ಲಿ ಕೂಡ ಜನರ ಮದ್ಯೆ ಇದ್ದು ಸಮಾಜದಲ್ಲಿ ಬದಲಾವಣೆ ತರುವಂತಹ ಪಕ್ಷ ನಮ್ಮ ಬಿಜೆಪಿ ಪಕ್ಷವಾಗಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಚ್ಛತೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ ನಾಯ್ಕ,ಮಾಜಿ ನಿಗಮ ಮಂಡಳಿ ಅಧ್ಯಕ್ಷರಾದ ಗೋವಿಂದ ನಾಯ್ಕ.ಜಿಲ್ಲಾ ಕಾರ್ಯದರರ್ಶಿ ಶ್ರೀಕಾಂತ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಉಪಾಧ್ಯಕ್ಷರಾದ ಗಣಪತಿ ದೇವಾಡಿಗ,ಪ್ರಕೊಷ್ಟ ಸಹಸಂಚಾಲಕರಾದ ಮೋಹನ ನಾಯ್ಕ,ಹಿಂದುಳಿದ ಮೋರ್ಚಾ ಅಧ್ಯಕ್ಷ ಉಮೇಶ ನಾಯ್ಕ,ಯುವ ಮೋರ್ಚಾ ಅಧ್ಯಕ್ಷರ
ಸುನಿಲ ಕಾಮತ,ಮುಟ್ಟಳ್ಳಿ ಪಂಚಾಯತ ಮಾಜಿ ಅಧ್ಯಕ್ಷರಾದ ಶೇಷಗಿರಿ ನಾಯ್ಕ,ಓಬಿಸಿ ಮೋರ್ಚಾದ ರಾಘವೇಂದ್ರ ನಾಯ್ಕ ಯಶೋಧರ ನಾಯ್ಕ,ಸಾಮಾಜಿಕ ಜಾಲತಾಣ ಸಂಚಾಲಕ ಪಾಂಡುರಂಗ ನಾಯ್ಕ,ಮೂಡಭಟ್ಕಳ ಬೂತಿನ ಅಧ್ಯಕ್ಷರಾದ ನಾಗೇಶ ನಾಯ್ಕ, ಲೋಕೇಶ ನಾಯ್ಕ, ಹನುಮಂತ ನಾಯ್ಕ. ಮುಟ್ಟಳ್ಳಿ ಪಂಚಾಯತಿನ ಸದಸ್ಯರಾದ ದೇವಯ್ಯ ನಾಯ್ಕ, ಲಕ್ಷ್ಮಿ ನಾಯ್ಕ.ಜಯಶ್ರೀ ನಾಯ್ಕ.ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಗೋವಿಂದ ನಾಯ್ಕ. ಗಜಾನನ ಭಟ್ಟ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.