ಹೊನ್ನಾವರ-ಮಂಕಿ ರಾ.ಹೆ.೬೬ರಲ್ಲಿ ನಡೆದ ಘಟನೆ
ಭಟ್ಕಳ: ಭಟ್ಕಳದ ಸಮೀಪ ಹೊನ್ನಾವರ-ಮಂಕಿ ರಾಷ್ಟ್ರೀಯ ಹೆದ್ದಾರಿ ೬೬ ಗುಳದಕೇರಿ ಬಳಿ ಆಕ್ಟಿವ ಹೊಂಡ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ತಾಯಿ ಮತ್ತು ಮಗಳು ಇಬ್ಬರು ಸಾವಿನಪ್ಪಿರುವ ಘಟನೆ ಗುರುವಾರ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮುರುಡೇಶ್ವರ ಮಾವಳ್ಳಿಯ ನಾಡಾವರ ಕೇರಿ ನಿವಾಸಿಗಳಾದ ಸವಿತಾ ರಾಜು ಆಚಾರಿ (40) ಹಾಗೂ ಮಗಳು ಅಂಕಿತ ಆಚಾರಿ (17) ಎಂದು ತಿಳಿದು ಬಂದಿದೆ.
ಕೆಎಸ್ಆರ್ಟಿಸಿ ಬಸ್ ಬಡಿದ ರಭಸಕ್ಕೆ ತಾಯಿ ಮಗಳು ಹಾಗೂ ಆಕ್ಟಿವ ಹೊಂಡ ಬಸ್ಸಿನಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ತಾಯಿ ಮಗಳನ್ನು ಭಟ್ಕಳ ತಾಲೂಕ ಭಟ್ಕಳ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಸರಸ್ವತ್ ಕೇರಿಯ ತಾಯಿ ಮನೆಗೆ ಮಗಳೊಂದಿಗೆ ಬಂದಿದ್ದ ಸವಿತಾ ಆಚಾರಿ ಅವರು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಮಂಗಳೂರಿನಿಂದ ಬೆಳಗಾವಿಯ ಕಡೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಮಂಕಿ ಜಾತ್ರೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಸ್ ಚಾಲಕ ಬೆಳಗಾವಿ ಸವದತ್ತಿಯ ಫಕೀರಪ್ಪ ಬಸಪ್ಪ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.