ಭಟ್ಕಳ: ಭಟ್ಕಳದಲ್ಲಿ ದನ ಕಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸುತ್ತಿದ್ದು, ನಿರಂತರವಾಗಿ ದನ ಕಳ್ಳತನ ನಡೆಯುತ್ತಿದೆ.
ಅದೇ ರೀತಿ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಕಾರಿನಲ್ಲಿ ಬಂದ ಮುಸುಕುಧಾರಿಗಳು ರಸ್ತೆಯಲ್ಲಿದ್ದ ಗೋವನ್ನು ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶುಕ್ರವಾರ ಮುಂಜಾನೆ 3:15 ಸುಮಾರಿಗೆ ಜಾಲಿ ಬ್ಯಾಂಕ್ ಸಮೀಪ ಕಾರಿನಲ್ಲಿ ಬಂದ ಕಳ್ಳರು ತಮ್ಮ ಗುರುತು ಪತ್ತೆಯಾಗದಂತೆ ಮುಖಕ್ಕೆ ಮುಖಗವಸ ಧರಿಸಿದ್ದರು. ರಸ್ತೆಯಲ್ಲಿದ್ದ ಗೋವಿಗೆ ಆಹಾರ ನೀಡುವ ನೆಪದಲ್ಲಿ ಗೋವಿನ ಸಮೀಪ ಹೋಗಿ ಬಳಿಕ ಅದನ್ನು ಎತ್ತಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.
ಈ ಎಲ್ಲಾ ದೃಶ್ಯಗಳು ಅಲ್ಲೇ ಸಮೀಪವಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.