ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಒಂಟಿ ಚಕ್ರದ ಸೈಕಲ್ಲಿನಲ್ಲೇ ಕೇರಳಿಗನ ಕನ್ಯಾಕುಮಾರಿ-ಕಾಶ್ಮೀರ ಪ್ರಯಾಣ!

ಭಟ್ಕಳ: ಒಂಟಿ ಚಕ್ರದ ಸೈಕಲ್ಲಿನಲ್ಲೇ ಕೇರಳಿಗನ ಕನ್ಯಾಕುಮಾರಿ-ಕಾಶ್ಮೀರ ಪ್ರಯಾಣ!

Sat, 23 Mar 2024 06:07:16  Office Staff   SO News

ಭಟ್ಕಳ: ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ರೀತಿಯ ಕಾರ್ಯಕ್ರಮ ಸರಕಾರ ಸೇರಿದಂತೆ ಸರಕಾರೇತರ ಸಂಸ್ಥೆಗಳು ನಿರಂತರವಾಗಿ ಮಾಡುತ್ತಿದೆ. ಸಾಮಾಜಕ್ಕೆ ಕಂಟಕವಾದ ಈ ಪಿಡುಗನ್ನು ತೊಲಗಿಸಲು ಯುವಕರು ಕೂಡಾ ಇತ್ತೀಚಿನ ದಿನಗಳಲ್ಲಿ ವಿಶೇಷ ರೀತಿಯಲ್ಲಿ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿ ದ್ದಾರೆ.

'ಇಂಥಹುದೇ ಒಂದು ಯುವಕರ ತಂಡ ಇದೀಗ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸೇ ನೋ ಡ್ರಗ್ಸ್ ಎನ್ನುವ ಭಿತ್ತಪತ್ರದ ಹಿಡಿದು ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿದೆ. ವಿಶೇಷವೆಂದರೆ ಮೂವರು ಯುವಕರಿರುವ ಈ ತಂಡದ ಓರ್ವ ಸದಸ್ಯ ಮಾತ್ರ ಒಂದೇ ಚಕ್ರವಿರುವ ಸೈಕಲ್ ನಲ್ಲಿ ಸಂಚರಿಸುತ್ತಿದ್ದು, ಜಾಗೃತಿಯ ಜೊತೆಗೆ ವಿಶ್ವ ದಾಖಲೆ ಮಾಡುವ ಹಂತದಲ್ಲಿದ್ದಾರೆ. ಅವರು ಒಂದೇ ಚಕ್ರದ ಸೈಕಲ್ ತುಳಿಯುತ್ತ ಭಟ್ಕಳ ದಾಟಿದ್ದಾರೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸವಿತ್, ತಾಹೀರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಶಂಶೀರ್  ಈ ರೀತಿಯ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ. ಕನ್ಯಾಕುಮಾರಿ ಯಿಂದ ಕಳೆದ ಎರಡು ತಿಂಗಳ ಹಿಂದೆ ಹೊರಟ ಇವರ ಸೈಕಲ್ ಯಾತ್ರೆ ಇದೀಗ ಭಟ್ಕಳ ತಲುಪಿದೆ. ಇನ್ನೂ ಆರು ತಿಂಗಳು ಸೈಕಲ್ ತುಳಿದು ಕಾಶ್ಮೀರವನ್ನು ತಲುಪಲಿದ್ದಾರೆ.

ಈ ಯುವಕರ ತಂಡದಲ್ಲಿರುವ ಸವಿತ್ ಅತ್ಯಂತ ತ್ರಾಸದಾಯಕವಾದ ಒಂದೇ ಚಕ್ರದ ಸೈಕಲ್‌ನಲ್ಲಿ ಸಂಚರಿಸುವ ಮೂಲಕ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದಾನೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಈ ಯುವಕರು ಡ್ರಗ್ಸ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಒಂದೇ ಚಕ್ರದಲ್ಲಿ ಸಂಚರಿಸಲು ನಿರಂತರವಾಗಿ ಪ್ರಯತ್ನಿಸಿದ್ದ ಸವಿತ್ ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಇದೀಗ ಒಂದೇ ಟಯರ್ ಇರುವ ಸೈಕಲ್ ಮೂಲಕ ದೇಶ ಸುತ್ತುವ ಹಂತಕ್ಕೆ ಬಂದಿದ್ದಾರೆ. ಕನ್ಯಾಕುಮಾರಿಯಿಂದ ಹೊರಡು ಕೇರಳದ ಎಲ್ಲಾ ಜಿಲ್ಲೆಗಳನ್ನು ದಾಟಿ ಬಂದಿರುವ ಸವಿತ್ 2 ಈಗಾಗಲೇ ಸುಮಾರು 2500 ಕಿಲೋಮೀಟರ್ ನಷ್ಟು ಸೈಕಲ್ ಸವಾರಿ ಮಾಡಿದ್ದಾರೆ.

4,500 ಸಾವಿರ ಕಿಲೋಮೀಟರ್ ದೂರದ ಈ ಯಾತ್ರೆಯನ್ನು ನೇರ ಮಾರ್ಗದ ಮೂಲಕ ಕಾಶ್ಮೀರ ತಲುಪುವ ಪ್ಲಾನ್ ಕೂಡಾ ಹಾಕಿಕೊಂಡಿದ್ದಾರೆ. ಒಂದೇ ಚಕ್ರದಲ್ಲಿ ಇಷ್ಟು ದ' ಸಂಚರಿಸುವ ಪ್ರಯತ್ನವನ್ನು ಯಾರೂ ಈವರೆಗೂ ಮಾಡಿಲ್ಲ. ಓರ್ವ ವ್ಯಕ್ತಿ ಸುಮಾರು 500 ಕಿಲೋಮೀಟರ್ ಇದೇ ರೀತಿ ಸಂಚರಿಸಿದ್ದು, ಈ ವಿಚಾರದಲ್ಲಿ ವರ್ಲ್ಡ್ ರೆಕಾಡ್ ಕೂಡಾ ಆತನ ಹೆಸರಿನಲ್ಲಿದೆ. ಆದರೆ ಸವಿತ್ ಈಗಾಗಲೇ 2300 ಕಿಲೋಮೀಟರ್ ಒಂದೇ ಚಕ್ರದಲ್ಲಿ ಸಂಚರಿಸಿದ್ದು, ಈತ ಜಾಗೃತಿಯ ಜೊತೆಗೆ ವಿಶ್ವ ದಾಖಲೆಯಲ್ಲೂ ಈತನ ಸಾಧನೆ ದಾಖಲಾಗಲಿದೆ.


Share: