ಭಟ್ಕಳ,ಮಾರ್ಚ್ 14: ಇಲ್ಲಿನ ಪ್ರತಿಷ್ಟಿತ ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ೧೧ ಸ್ಥಾನಗಳಿಗಾಗಿ ನಡೆದ ಚುನಾವಣೆಯು ಇಲ್ಲಿನ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಶಾಂತಿಯಿಂದ ಮುಕ್ತಾಯಗೊಂಡಿದ್ದು ಮುಂದಿನ ಐದು ವರ್ಷದ ಅವಧಿಗಾಗಿ ಬ್ಯಾಂಕಿನ ನಿರ್ದೇಶಕರಾಗಿ ಒಟ್ಟು ೧೧ಜನ ನಿರ್ದೇಶಕರು ಆಯ್ಕೆಯನ್ನು ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಕಾರವಾರ ಸಹಕಾರಿ ಸಂಘಗಳ ಡೆಪ್ಯೂಟಿ ರಜಿಸ್ಟ್ರಾರ‍್ ವಿರಣ್ಣ ಎಳಲಿ ಘೋಷಿಸಿದರು.ಒಟ್ಟು ೧೨,೩೯೪ ಮತಗಳಲ್ಲಿ ೧೬೧೭ ಮತದಾನವಾಗಿದ್ದು ೧೭೫ ಮತಗಳು ತಿರಸ್ಕೃತಗೊಂಡು ಶೇ೧೩.೫ ಮತದಾನವಾಗಿದೆ ಎಂದು ಅವರು ತಿಳಿಸಿದರು.
೨೫ ವರ್ಷಗಳ ನಂತರ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆಯು ಜರುಗಿದ್ದು ನ್ಯೂ ಇಂಗ್ಲೀಷ್ ಶಾಲೆಯು ಸಾಕ್ಷಿಯಾಯಿತು. ಬ್ಯಾಂಕಿನ ಒಟ್ಟೂ ೧೩ ನಿರ್ದೇಶಕ ಸ್ಥಾನದಲ್ಲಿ ದಕ್ಷಿಣಕನ್ನಡ ಜಿಲ್ಲೆಯಿಂದ ಮುಹಮ್ಮದ್ ಅಕ್ರಮ್ ಮುಸ್ಬಾ ಹಾಗೂ ಉಡುಪಿ ಜಿಲ್ಲೆಯಿಂದ ಗಂಗೊಳ್ಳಿಯ ಅಬ್ದುಲ್ ಮಜೀದ ಚೌಗುಲೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದಂತೆ ೧೧ ಸ್ಥಾನಗಳಿಗಾಗಿ ಚುನಾವಣೆಯು ಜರುಗಿದ್ದು ಅದರಲ್ಲಿ ಅದರಲ್ಲಿ ಅಬುಬಕರ‍್ ಅಲಿ ಕಾಸಿಮಜಿ ೮೭೦ಮತ, ದಾಮ್ದಾ ಮುಹಮ್ಮದ್ ಅಸ್ಸಾರ‍್ ೮೦೩ಮತ, ಗಣಪತಿ ಹನುಮಂತ ಪೈ ೮೦೬ಮತ, ಜಾಫರ‍್ ಸಾದಿಕ್ ಮುಹಮ್ಮದ್ ಇಸ್ಮಾಯಿಲ್ ೭೮೧ಮತ, ಮುಹಮ್ಮದ್ ಸಾದುಲ್ಲಾ ಮುಹಮ್ಮದ್ ಸುಕ್ರಿ ದಾಮ್ದಾ ೮೧೯ಮತ, ಶೇಖ್ ಶಬ್ಬಿರ‍್ ಕಾದಿರ‍್ ಬಾಷ ಷರೀಫ್ ೭೮೪ ಮತ, ಶ್ರೀಧರ‍್ ಭೈರಪ್ಪ ನಾಯ್ಕ್ ೮೩೬ಮತ, ಮೀಸಲು ಕ್ಷೇತ್ರದಿಂದ ಮಾಸ್ತಿ ಸಂಕಯ್ಯ ಮೊಗೇರ‍್ ೧೨೭೭ ಮತ, ವೃತ್ತಿಪರ ಕ್ಷೇತ್ರದಿಂದ ನ್ಯಾಯವಾದಿ ವಿಕ್ಟರ‍್ ಗೋಮ್ಸ್ ೧೧೩೨ ಮತ, ಪರಿ ಮುಹಮ್ಮದ್ ಹಸೇನ್ ೧೧೧೯ ಮತ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಬೀಬಿ ಶಬಿನಾ ಸಿರಾಜ್ ೧೦೬೪ ಮತಗಳನ್ನು ಪಡೆದು ಆಯ್ಕಗೊಂಡಿದ್ದಾರೆ.