ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗಂಗೊಳ್ಳಿ: ತ್ರಾಸಿ ಬಳಿ ಟ್ರಾಕ್ಟರ್-ಇಂಡಿಕಾ ಕಾರ್ ನಡುವೆ ಅಪಘಾತ-ಓರ್ವರ ಸಾವು ಐವರಿಗೆ ಗಾಯ

ಗಂಗೊಳ್ಳಿ: ತ್ರಾಸಿ ಬಳಿ ಟ್ರಾಕ್ಟರ್-ಇಂಡಿಕಾ ಕಾರ್ ನಡುವೆ ಅಪಘಾತ-ಓರ್ವರ ಸಾವು ಐವರಿಗೆ ಗಾಯ

Sun, 27 Dec 2009 02:47:00  Office Staff   S.O. News Service
ಗಂಗೊಳ್ಳಿ,ಡಿಸೆಂಬರ್ 26:ಮೊನ್ನೆ ಸಂಜೆ ಸುಮಾರು ಆರುಕಾಲು ಘಂಟೆಯ ಹೊತ್ತೆಗೆ ಗಂಗೊಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಗೊಳಪಡುವ ತ್ರಾಸಿ ಬಳಿ ಇಂಡಿಕಾ ಕಾರ್ ಹಾಗೂ ಟ್ರಾಕ್ಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮಾವಾಗಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು ಐವರು ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಕಾರು ಮುಂಭಾಗದಿಂದ ಬರುತ್ತಿದ್ದ ಟ್ರ್ಯಾಕ್ಟರಿಗೆ ಢಿಕ್ಕಿ ಹೊಡಿದಿದೆ.  ಕಾರು ಬಜ್ಪೆಯಿಂದ ಬೈಂದೂರು ಕಡೆಗೂ, ಟ್ರ್ಯಕ್ಟರ್ ಬೈಂದೂರಿನಿಂದ ಕುಂದಾಪುರದೆಡೆಗೂ ತೆರಳುತ್ತಿದ್ದವು.  

ಕಾರಿನಲ್ಲಿದ್ದ ಪ್ರಯಾಣಿಕರಾದ ಉಮ್ಮರ್ ಸಾಹೇಬ್ ನಾವುಂದ (೬೦) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಕಾರಿನ ಇತರ ಪ್ರಯಾಣಿಕರಾದ ಮುಮ್ತಾಜ್ (೩೬), ರುಫೈದಾ (೯), ಶರೀಫ್ (೧೭), ಯಾಸಿರ್ (೧೩) ಹಾಗೂ ಕಾರುಚಾಲಕ ಪ್ರಕಾಶ್ (೩೪) ಎಂಬುವವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಕುಂದಾಪುರದ ವಿನಯ್ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಮದನ್ ಎ. ಗಾಂವಕರ್ ರವರು ಸ್ಥಳಕ್ಕೆ ಹಾಜರಾಗಿ ಪರಿಶೀಲನೆ ನಡೆಸಿಅರು. 

ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ

Share: