ಚಿಕ್ಕಮಗಳೂರು, ಅ.೪: ಶ್ರೀರಾಮ ಸೇನೆಯು ಈ ಬಾರಿ ಆಯೋಜಿಸಿದ್ದ ದತ್ತಮಾಲಾ ಅಭಿಯಾನವು ಯಾವುದೇ ಸದ್ದು ಗದ್ದಲವಿಲ್ಲದೆ ಬೆರಳೆಣಿಕೆಯ ದತ್ತಮಾಲಾಧಾರಿಗಳ ಉಪಸ್ಥಿತಿಯಲ್ಲಿ ಮುಗಿದಿದೆ.
ಶ್ರೀರಾಮ ಸೇನೆಯ ದತ್ತಮಾಲಾಧಾರಿಗಳು ನಗರದಲ್ಲಿ ಶೋಭಾಯಾತ್ರೆ ಕೈಗೊಳ್ಳುವ ಪ್ರಕಟನೆ ನೀಡಿದ್ದರಿಂದ ಜಿಲ್ಲಾಡಳಿತವು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಬಾಬಾಬುಡಾನ್ ಗಿರಿ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಿ ಪೊಲೀಸ್ ಹಾಗೂ ಸರಕಾರಿ ವಾಹನಗಳ ಹೊರತಾಗಿ ಬೇರೆ ಎಲ್ಲ ವಾಹನಗಳ ಓಡಾಟವನ್ನು ನಿಷೇಧಿಸಲಾಗಿತ್ತು. ಸುಮಾರು ಒಂದೂವರೆ ಸಾವಿರ ಪೊಲೀಸರು ಬಾಬಾ ಬುಡಾನ್ಗಿರಿ ಹಾಗೂ ಚಿಕ್ಕಮಗಳೂರು ನಗರದಾದ್ಯಂತ ಕರ್ತವ್ಯದಲ್ಲಿ ನಿರತರಾಗಿದ್ದರು. ಇಷ್ಟೆಲ್ಲ ಕಟ್ಟುನಿಟ್ಟಿನ ಭದ್ರತೆಯ ಮಧ್ಯೆ ಕೆಲವೇ ದತ್ತಮಾಲಾಧಾರಿಗಳು ತಮ್ಮ ಅಭಿಯಾನ ಮುಗಿಸಿದರು.
ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಡಿಸೆಂಬರ್ನಲ್ಲಿ ದತ್ತ ಜಯಂತಿಯಂದು ದತ್ತಮಾಲೆ ಧರಿಸುವ ನಿರ್ಧಾರ ಮಾಡಿರುವು ದರಿಂದ ಪ್ರತಿವರ್ಷ ಅಕ್ಟೋಬರ್ನಲ್ಲಿ ನಡೆಯುವ ಕಾನೂನು ಉಲ್ಲಂಘನೆ ಈ ಬಾರಿ ನಡೆಯದೆ ಜನರು ಭಯ ಮುಕ್ತರಾಗಿ ಇರುವಂತಾಯಿತು.