ಸಕಲೇಶಪುರ, ಡಿಸೆಂಬರ್ ೧ :ವಾಹನ ಕೊಂಡ ತಕ್ಷಣ ವಿಮೆ ಮಾಡಿಸಿಕೊಳ್ಳಿ ಆಗ ಮಾತ್ರ ವಾಹನ ಹಾಗೂ ಆದರ ಮಾಲೀಕ ಸುರಕ್ಷಿತ ಎಂದು ಹಿರಿಯ ಶ್ರೇಣಿ ನ್ಯಾಯಲಾಯದ ನ್ಯಾಯಮೂರ್ತಿ ಕೊಟ್ರಯ್ಯ ಹಿರೇಮಠ್ ಹೇಳಿದ್ದಾರೆ.
ಅವರು ಮಂಗಳವಾರ ಪಟ್ಟಣದ ಪುರಭವನದಲ್ಲಿ ಆಟೋ ಚಾಲಕರಿಗಾಗಿ ಆಯೋಜಿಸಲಾಗಿದ್ದ ಸಂಚಾರಿ ಜನತಾ ನ್ಯಾಯಾಲಯ ಕಾನೂನು ಸುರಕ್ಷತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಆ ವಾಹನದ ಸುರಕ್ಷತೆಗೆ ಹಾಗೂ ಅದರಲ್ಲಿ ಸಂಚರಿಸುವ ಜನರ ಸುರಕ್ಷತೆಯ ದೃಷ್ಟಿಯಿಂದ ವಾಹನ ವಿಮೆ ಮಾಡಿಸ ಬೇಕು. ವಿಮೆ ಮಾಡಿಸಲು ನಿರ್ಲಕ್ಷಿಸಿದ ವ್ಯಕ್ತಿಗಳು ವಾಹನ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಪಾರ ನಷ್ಟ ಅನುಭವಿಸ ಬೇಕಾಗುತ್ತದೆ ಎಂದರು. ಅಲ್ಲದೆ ವಾಹನ ಕೊಂಡ ತಕ್ಷಣ ಆರ್.ಟಿ.ಓ ಕಚೇರಿಯಲ್ಲಿ ನೊಂದಾಯಿಸಿ ಕೊಳ್ಳಿ ನೊಂದಾಯಿಸಿ ಕೊಳ್ಳುವ ವರಗೆ ಆ ವಾಹನ ನಿಮ್ಮದಾಗಿರುವುದಿಲ್ಲ.ಚಾಲಕರು ಸಮವಸ್ತ್ರ ದರಿಸದಿರುವುದು, ಸಣ್ಣ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಹಾಗು ರಸ್ತೆ ನಿಯಮಗಳನ್ನು ಪಾಲಿಸದಿರುವುದು ಸಹ ಕಾನೂನಿನ ದೃಷ್ಟಿಯಲ್ಲಿ ಅಪರಾದವಾಗಿದೆ ಈ ಎಲ್ಲ ಅಂಶಗಳನ್ನು ಪಾಲಿಸುವವರೆ ಉತ್ತಮ ನಾಗರೀಕರು ಎಂದರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಸಹಾಯಕ ಅಧಿಕಾರಿ, ಪ್ರಾದೇಶಿಕ ಸಾರಿಗೆ ಇನ್ಸಪೆಕ್ಟರ್ ಅನಿಲ್ ಕುಮಾರ್ ಪೋಲಿಸ್ ಇನ್ಸಪೆಕ್ಟರ್ ಗಣೇಶ್. ವಕೀಲರ ಸಂಘದ ಅಧ್ಯಕ್ಷ ಶೇಷೇಗೌಡ ಮುಂತಾದವರು ಇದ್ದರು.
ಪಟ್ಟಣದಲ್ಲಿ ಏಡ್ಸ ದಿನಾಚರಣೆಯ ಅಂಗವಾಗಿ ಜೆ.ಎಸ್.ಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮಂಗಳವಾರ ಬೃಹತ್ ಜಾಗ್ರತಿ ರ್‍ಯಾಲಿ ನೆಡಸಿದರು.
ಬೇಳಿಗ್ಗೆ ೧೦.೩೦ಕ್ಕೆ ಪಟ್ಟಣದ ಸಕಲೇಶಪುರಸ್ವಾಮಿ ದೇವಸ್ಥಾನದಿಂದ ಆರಂಭವಾದ ವಿದ್ಯಾರ್ಥಿ ಜಾಥ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಏಡ್ಸ ರೋಗದ ಬಗ್ಗೆ ಅರಿವು ಮೂಡಿಸುವ ಬಿತ್ತಿಪತ್ರ ಪ್ರದರ್ಶಿಸಿದರು. ನಂತರ ಸರ್ಕಾರಿ ಕ್ರಾಪರ್ಡ ಅಸ್ಪತ್ರೆಯಲ್ಲಿ ಏಡ್ಸ ರೋಗದ ಕುರಿತು ಮಾಹಿತಿ ನೀಡುವ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದರು ಈ ಸಂದರ್ಭದಲ್ಲಿ ರೋಗದ ಗುಣ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಏಡ್ಸ ಅರಿವಿನ ಜಾಥವನ್ನು ಉದ್ಘಾಟಿಸಿ ಮಾತನಾಡಿದ ಜೆ,ಎಸ್,ಎಸ್ ಸಂಸ್ಥೆಯ ಅಧೀಕ್ಷಕ ನಾಗರಾಜ್ ಮಾತನಾಡಿ ವಿದ್ಯಾ ಸಂಸ್ಥೆಗಳು ಕೇವಲ ವಿದ್ಯೆ ಕಲಿಸುವದನ್ನು ಮಾತ್ರ ಮಾಡದೆ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು.