ಭಟ್ಕಳ : ಆಟೋ ಹಾಗೂ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಬಂಧಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಡಿಗ್ಗದೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಘಟನೆ ನಡೆದಿದೆ.
ಅಪಘಾತದಲ್ಲಿ ಓರ್ವ ಮೀನುಗಾರ ಮಹಿಳೆ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಬೆಳಕೆ ಕಡೆಯಿಂದ ಭಟ್ಕಳದ ಕಡೆ ಚಲಿಸುತ್ತಿದ್ದು, ಇನ್ನೂ ಟಾಟಾ ಏಸ್ ಭಟ್ಕಳದಿಂದ ಶಿರೂರು ಕಡೆ ಚಲಿಸುತ್ತಿರುವುದಾಗಿ ಹೇಳಲಾಗಿದೆ.
ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು ಆಟೋ ಚಾಲಕ ಮತ್ತು ಇನ್ನೂ ಒರ್ವ ನೀಗೆ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಮಂಜಮ್ಮ ಮೊಗೇರ್ 40 ವರ್ಷ ಮತ್ತು ವೆಂಕಟರಮಣ ನಾಯ್ಕ 52 ವರ್ಷ ಇಬ್ಬರನ್ನ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತದ ರಭಸಕ್ಕೆ ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.